ದ.ಭಾರತದತ್ತ ಬಾಂಬ್ ಎಸೆದ ಬಾಬಾ ರಾಮದೇವ್

'ದೇವ ಮಾನವ, ಸಾಧು-ಸನ್ಯಾಸಿ ಎಂದು ಹೇಳಿಕೊಂಡು ವಂಚನೆ, ಕಪಟ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಮಾಯಕ ಜನ ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಮದೇವ್, 'ದಕ್ಷಿಣ ಭಾರತದಲ್ಲಿ ಒಬ್ಬ ಸ್ವಯಂ ಘೋಷಿತ ದೇವ ಮಾನವ ಇದ್ದಾನೆ. ಆತ 5000 ಕೋಟಿ ರು.ಗೂ ಹೆಚ್ಚು ತೂಗುತ್ತಾನೆ' ಎಂದು ದಕ್ಷಿಣದತ್ತ ಬಾಂಬ್ ಎಸೆದಿದ್ದಾರೆ.
ಆದರೆ ಆ ದೇವ ಮಾನವ ಯಾರು, ಎಲ್ಲಿಯವರು, ಅವರ ಪೂರ್ವೋತ್ತರಗಳೇನು? ಎಂಬುದರ ಬಗ್ಗೆ ಬಾಬಾ ರಾಮದೇವ್ ಬಾಯ್ಬಿಟ್ಟಿಲ್ಲ. 'ಕೇವಲ ನಿರ್ಮಲ ಬಾಬಾ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರ ಹಾಗೆ ಇನ್ನೂ ಹೆಚ್ಚು ಬೆಲೆಬಾಳುವ ಇಂತಹ ದೇವ ಮಾನವರ ಬಗ್ಗೆ ಯಾಕೆ ಏನೂ ಕ್ರಮ ಕೈಗೊಳ್ಳುವುದಿಲ್ಲ' ಎಂದು ಬಾಬಾ ರಾಮದೇವ್ ಕಿಡಿಕಾರಿದ್ದಾರೆ.
ಸ್ವಾಮೀಜಿಗಳು ಹಾಗಿರಲಿ. ದೇಶವನ್ನು ಲೂಟಿ ಮಾಡುತ್ತಿರುವ ರಾಜಕಾರಣಿಗಳ ಕಪಟತನ ಯಾವಾಗ ಕಳಚಿ ಬೀಳುವುದು? ಕಲ್ಲಿದ್ದಲು ಹಗರಣದ ಬಗ್ಗೆ ನಾನು ಮೊದಲು ಸಮರ ಸಾರಿದೆ. ಅದರಿಂದ ಕೆಲ ಪಕ್ಷಗಳ ನೇತಾರರ ಮುಖ ಕಪ್ಪಿಟ್ಟಿತು. ಭಾರತದ ಖಜಾನೆಯನ್ನು ಹೀಗೆ ಲೂಟಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳೋದು ಯಾವಾಗ? ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications