ಬೆಂಬಲಿಗರೇ ಸುಪ್ರೀಂ; RSSಗೆ ನೋ ಅಂದ ಬಿಎಸ್‌ವೈ

ನನ್ನ ಮೇಲೆ ಸಿಬಿಐ ತನಿಖೆಗೆ ಆದೇಶಿಸಿದ್ದರೂ ಬೆಂಬಲಿತ ಶಾಸಕರು, ಸಚಿವರು ತಮ್ಮ ಮನೆಗೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಬಿಎಸ್‌ವೈ ಅವರನ್ನುದ್ದೇಶಿಸಿ 'ನನಗೆ ನೀವೇ ಸುಪ್ರೀಂ' ಎಂದಿದ್ದಾರೆ. ಒಂದು ವೇಳೆ ಸಿಬಿಐ ಉರುಳು ತಮ್ಮ ಕೊರಳಿಗೆ ಬಿದ್ದರೆ ಅದನ್ನು ಬಿಡಿಸಿಕೊಳ್ಳುವುದು ಹೇಗೆ ಮತ್ತು ಇದೇ ವೇಳೆ ತಮ್ಮ ಬೆಂಬಲಿಗರ ಹಿತಾಸಕ್ತಿ ಕಾಯ್ದುಕೊಳ್ಳುವುದು ಹೇಗೆ ಎಂದು ಮಂತ್ರಾಲೋಚಿಸಿದ್ದಾರೆ. 8 ಸಚಿವರು, 22 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಮಧ್ಯೆ, ಬಿಎಸ್‌ವೈ ತಮ್ಮ ಬೆಂಬಲಿಗರೊಂದಿಗೆ ರಹಸ್ಯ ಸಭೆ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕದಲ್ಲಿ RSS ನಾಯಕ ಸತೀಶ್ ಜಿ ಅವರು ಬಿಎಸ್‌ವೈ ಮನೆಗೆ ಧಾವಿಸಿಬಂದಿದ್ದಾರೆ.
ಬಿಎಸ್‌ವೈ ಜತೆ ಸುಮಾರು 30 ನಿಮಿಷ ಕಾಲ ಮಾತನಾಡಿದ ಸತೀಶ್ ಜಿ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಸಮಾಧಾನವಾಗಿರಿ ಎಂದು ಬಿಎಸ್‌ವೈ ಅವರಲ್ಲಿ ಕೇಳಿಕೊಂಡಿದ್ದಾರೆ.
ಆದರೆ ಬಿಎಸ್‌ವೈ ಅವರು ಅದಕ್ಕೆ ಸೊಪ್ಪು ಹಾಕದೆ 'ನನ್ನ ದಾರಿ ನನ್ನದು. ನನಗೆ ನನ್ನ ಬೆಂಬಲಿಗರ ಹಿತಾಸಕ್ತಿಯೇ ಮುಖ್ಯ. ಅವರ ನಿರ್ಧಾರವೇ ಪ್ರಧಾನ' ಎಂದು ನಯವಾಗಿ ಹೇಳಿಕಳಿಸಿದ್ದಾರೆ ಎಂದು ಬಿಎಸ್‌ವೈ ಆಪ್ತ ಮೂಲಗಳು ಹೇಳಿವೆ.












Click it and Unblock the Notifications