ಸೆಂಟ್ರಲ್ ಮಾಲ್ ಟೆರೇಸ್ ನಿಂದ ಬಿದ್ದು ಸಾವು

ಜಯನಗರ 9ನೇ ಬ್ಲಾಕಿನ ರಾಗಿಗುಡ್ಡ ದೇಗುಲದಿಂದ ಅನತಿ ದೂರದಲ್ಲಿರುವ ಸೆಂಟ್ರಲ್ ಮಾಲ್ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ದೇವಪ್ರಕಾಶ್ ದಯ್ಯ(22) ಆಕಸ್ಮಿಕ ಸಾವಿಗೀಡಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದ ದಯ್ಯ, ತಿಂಡಿ ತಿನ್ನುವ ಸಲುವಗಿ 7ನೇ ಮಹಡಿಗೆ ಹೋಗಿದ್ದಾನೆ. ಆದರೆ, ಆತುರವಾಗಿ ಮೆಟ್ಟಿಲೇರಿದ ಪ್ರಕಾಶ್ ಆಯತಪ್ಪಿ ಮಹಡಿ ಮೇಲಿಂದ ಬಿದ್ದು ಪ್ರಾಣ ತೆತ್ತಿದ್ದಾನೆ.
ಮೃತ ಪ್ರಕಾಶ್ ದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿಡಲಾಗಿದೆ. ರಾಜಸ್ಥಾನ ಮೂಲದ ದಯ್ಯ ಅವರ ಕುಟುಂಬದವರಿಗೆ ವಿಷಯ ತಿಳಿಸಲಾಗಿದೆ. ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications