ಹಠ ಯೋಗಿ ಬಿಎಸ್ ವೈ ಮುಂಚೆ ಅಂಗಲಾಚಿದ ರವಿ

BS Yeddyurappa
ಬೆಂಗಳೂರು, ಮೇ.11: 'ನೀವು ಮನಸ್ಸು ಮಾಡಿದರೆ, ಪಕ್ಷ ಉಳಿಯುತ್ತದೆ. ನನ್ನಂಥ ಪಕ್ಷ ನಿಷ್ಠರು ಉಸಿರಾಡಬಹುದು. ದಯವಿಟ್ಟು ಸದಾನಂದ ಗೌಡರ ಸಂಪುಟ ವಿಸ್ತರಣೆಗೆ ಅಡ್ಡಿಪಡಿಸಬೇಡಿ' ಎಂದು ಕರ್ನಾಟಕದ 'ಹೈಕಮಾಂಡ್' ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಂದೆ ಶಾಸಕ ಸಿಟಿ ರವಿ ಗೋಗರೆದಿದ್ದಾರೆ.

ಒಮ್ಮೆ ಸಚಿವನಾಗಬೇಕು ಎಂಬ ಹಠಕ್ಕೆ ಬಿದ್ದಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ, ಗುರುವಾರ(ಮೇ.10) ರಾತ್ರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದರು.

ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪರ ನಿವಾಸಕ್ಕೆ ಭೇಟಿ ನೀಡಿ ಮನವಿ ಮಾಡಿದ್ದನ್ನು ಸ್ವತಃ ಸಿಟಿ ರವಿ ಅವರೇ ಸುದ್ದಿಗಾರರಿಗೆ ತಿಳಿಸಿದರು.

ಸಂಪುಟ ವಿಸ್ತರಣೆ ಮಾಡುವಂತೆ 74 ಮಂದಿ ಶಾಸಕರ ಸಹಿ ಸಂಗ್ರಹಿಸಿರುವ ಪತ್ರವನ್ನು ಯಡಿಯೂರಪ್ಪರಿಗೆ ನೀಡಿದ್ದೇನೆ. ಜೊತೆಗೆ ಸಂಪುಟ ವಿಸ್ತರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದೇವೆ.

ಮೇ 14ರಂದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪರಿಗೆ, ಮೇ 15ರಂದು ದಿಲ್ಲಿಗೆ ಇನ್ನಿತರ ಶಾಸಕರೊಂದಿಗೆ ತೆರಳಿ ವರಿಷ್ಠರಿಗೆ ಮನವಿ ಸಲ್ಲಿಸುತ್ತೇವೆ ಎಂದು ಸಿಟಿ ರವಿ ತಿಳಿಸಿದರು.

ಹಿರಿಯ ಪಕ್ಷ ವರಿಷ್ಠರನ್ನು ಪಕ್ಷದ ಸಂಘಟನೆಗೆ ನೇಮಿಸುವ ಕಾಮರಾಜ್ ಯೋಜನೆ ಬಗ್ಗೆ ಕೂಡಾ ಯಡಿಯೂರಪ್ಪ ಅವರಿಗೆ ಸಿಟಿ ರವಿ ತಿಳಿಸಿದ್ದಾರೆ. ಆದರೆ, ಶುಕ್ರವಾರ(ಮೇ.11) ಸುಪ್ರೀಂಕೋರ್ಟ್ ತೀರ್ಪಿನ ನಿರೀಕ್ಷೆಯಲ್ಲಿರು ಯಡಿಯೂರಪ್ಪ ಅವರು ಯಾವುದೇ ಆಶ್ವಾಸನೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+