ಒಪ್ಪಂದದಂತೆ ಇನ್ಫಿ, ವಿಪ್ರೋಗೆ ಭೂಮಿ ಮಂಜೂರು

ಕಳೆದ ಬಾರಿಯ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ(GIM) ದಲ್ಲಿ ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.
ಇನ್ಫೋಸಿಸ್ ಸಂಸ್ಥೆ ಜೊತೆ 2,950 ಕೋಟಿ ರು ವೆಚ್ಚದ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಪ್ರೋ ಸಂಸ್ಥೆ ಜೊತೆ 537 ಕೋಟಿ ರು ವೆಚ್ಚದ ಒಪ್ಪಂದವಾಗಿದೆ. ಎರಡು ಸಂಸ್ಥೆಗಳಿಂದ ಸರ್ಜಾಪುರ ರಸ್ತೆ ಬಳಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರಗಳು ಸ್ಥಾಪನೆಗೊಳ್ಳಲಿದೆ ಎಂದು ಸಚಿವ ನಿರಾಣಿ ಹೇಳಿದರು.
ರೈತರು ಹಾಗೂ ನಕಲಿ ಜಮೀನು ಪತ್ರ ವಿವಾದದಿಂದಾಗಿ ಸಂಸ್ಥೆಗಳಿಗೆ ಭೂ ಮಂಜೂರಾತಿ ವಿಳಂಬವಾಗಿತ್ತು. ಮೂಲ ಸೌಕರ್ಯ ಪೂರೈಕೆ ಕೂಡಾ ವ್ಯತ್ಯಯವಾಗಿತ್ತು ಎಂದು ನಿರಾಣಿ ಹೇಳಿದ್ದಾರೆ.
ಜಿಮ್ ಒಪ್ಪಂದದಂತೆ ಆರ್ಸೆಲರ್ ಮಿತ್ತಲ್ ಅವರು ಕರ್ನಾಟಕದಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸುತ್ತಾರಾ? ಅಥವಾ ಭಾರತದ ಇತರೆಡೆಯಂತೆ ಕರ್ನಾಟಕದ ಯೋಜನೆಯನ್ನು ಸ್ಥಗಿತಗೊಳಿಸುತ್ತಾರಾ? ಎಂಬ ಪ್ರಶ್ನೆ ಸಚಿವ ನಿರಾಣಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.












Click it and Unblock the Notifications