ಧರಂಸಿಂಗ್, ರೇವಣ್ಣರಿಗೆ ತಾತ್ಕಾಲಿಕ ರಿಲೀಫ್

Dharam, HD Revanna gets relief
ಬೆಂಗಳೂರು, ಮೇ.10: ಮಾಜಿ ಸಿಎಂ ಧರಂಸಿಂಗ್ ಮತ್ತು ದೇವೇಗೌಡರ ಕುಟುಂಬದ ಎಚ್ ಡಿ ರೇವಣ್ಣ, ಬಾಲಕೃಷ್ಣೇಗೌಡರ ಪತ್ನಿ ಕವಿತಾ ಮುಂತಾದವರ ವಿರುದ್ಧ ಲೋಕಾಯುಕ್ತ ಪೊಲೀಸರು ಕೈಗೊಂಡಿದ್ದ ತನಿಖೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಏಕ ಸದಸ್ಯ ಪೀಠ ಗುರುವಾರ (ಮೇ.10) ಆದೇಶ ಹೊರಡಿಸಿದೆ. ರೇವಣ್ಣ ಹಾಗೂ ಧರಂಸಿಂಗ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ

ರೇವಣ್ಣ ಸೇರಿದಂತೆ ಸುಮಾರು 13 ಜನರ ವಿರುದ್ಧದ ಭೂ ಹಗರಣ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ ಮೇ 21ರ ಒಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾ. ಎನ್ ಕೆ ಸುಧೀಂದ್ರರಾವ್ ಅವರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು. ನಂತರ ಆರೋಪಿಗಳ ಮೇಲೆ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಈಗ ಈ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಜೆಡಿಎಸ್-ಕಾಂಗ್ರೆಸ್ ಆಡಳಿತದಲ್ಲಿ ಧರಂಸಿಂಗ್ ನೇತೃತ್ವದ ಸರ್ಕಾರ 2006ರಲ್ಲಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಉದ್ಯಾನವನ ನಿರ್ಮಿಸಲು ಬಿಡಿಎ ಮೀಸಲಿಟ್ಟ 10 ಎಕರೆ ಬಿಡಿಎ ಭೂಮಿಯನ್ನು ಡಿ-ನೋಟಿಫೈ ಮಾಡಿರುವುದರ ವಿರುದ್ಧ ರಾಯಸಂದ್ರ ರವಿಕುಮಾರ್ ಎಂಬುವರು ಖಾಸಗಿ ದೂರು ಸಲ್ಲಿಸಿದ್ದರು.

ರಾಯಸಂದ್ರ ರವಿಕುಮಾರ್ ಅವರು ಸಲ್ಲಿಸಿದ ಖಾಸಗಿ ದೂರಿನ ಪ್ರಕಾರ ಭೂಮಿಯನ್ನು ಬಿಡಿಎ 1996ರಲ್ಲಿಯೇ ನೋಟಿಫೈ ಮಾಡಿದೆ. ಆದರೆ, ಧರಂಸಿಂಗ್ ಆಡಳಿತಾವಧಿಯಲ್ಲಿ ಈ ಭೂಮಿಯನ್ನು ಅಂದಿನ ಲೋಕೋಪಯೋಗಿ ಸಚಿವ ರೇವಣ್ಣ ಅವರ ಆದೇಶದ ಮೇರೆಗೆ 10 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ.

ಡಿನೋಟಿಫೈ ಆಗಿ ಎರಡು ತಿಂಗಳಲ್ಲೇ ಈ ಭೂಮಿಯನ್ನು ಕವಿತಾ ಎಂಬ ಹೆಸರಿನಲ್ಲಿ ಖರೀದಿಸಲಾಗಿದ್ದು,ಇದರಲ್ಲಿ 2.11 ಎಕರೆ ಪ್ರದೇಶವನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ 3.5 ಕೋಟಿ ರು ಲಾಭದೊಂದಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+