ಸುಂದರ ಬೆಂಗಳೂರಿನ ಬಗ್ಗೆ ನಿಮ್ಮ ಕನಸುಗಳೇನು?
ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶಕ್ಕಾಗಿ ರೂಪಿಸಲಾಗಿರುವ ರಿವೈಸ್ಡ್ ಮಾಸ್ಟರ್ ಪ್ಲಾನ್ (ಆರ್‌ಎಂಪಿ) 2015 ಅನ್ನು ಪರಿಷ್ಕರಿಸುವ ಉದ್ದೇಶದಿಂದ ಉತ್ತಮ ಸಲಹೆಗಳನ್ನು ನೀಡಲು ಬೆಂಗಳೂರಿನ ಮಹಾಜನತೆಗೆ ಕರ್ನಾಟಕ ಸರಕಾರ ಆಹ್ವಾನ ನೀಡಿದೆ. ನಿಮಗೇನಾದರೂ ಹೇಳಬೇಕಿದ್ದರೆ ಜುಲೈ 7ರೊಳಗೆ ಹೇಳಬೇಕು.
ಈ ಕುರಿತು ಮೇ 7ರಂದು ಬಿಜೆಪಿ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು ಈಗಾಗಲೆ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಮೂಲಭೂತ ಸೌಕರ್ಯಗಳು ಸರಿಯಾಗಿ ನಾಗರಿಕರಿಗೆ ದೊರೆಯುತ್ತಿಲ್ಲ. ರಸ್ತೆಯಿದ್ದರೆ ನೀರಿರುವುದಿಲ್ಲ, ನೀರಿದ್ದರೆ ವಿದ್ಯುತ್ ಇರುವುದಿಲ್ಲ. ಇವುಗಳನ್ನೆಲ್ಲ ದೃಷ್ಟಿಯಲ್ಲಿ ಇಟ್ಟುಕೊಂಡು ಭವಿಷ್ಯತ್ತಿನಲ್ಲಿ ಎಲ್ಲ ಏಜೆನ್ಸಿಗಳ ಜೊತೆಗೆ ಉತ್ತಮ ಸಂವಹನ ಸಾಧಿಸುವ ಗುರಿಯಿಂದ ನೀಲನಕ್ಷೆಯನ್ನು ಬಿಡಿಎ ತಯಾರಿಸುತ್ತಿದೆ. ಇದಕ್ಕಾಗಿ ತಜ್ಞ ನಾಗರಿಕರ ಸೂಚನೆಗಳನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ.
ಇಂಥ ಅವಕಾಶ ಬೆಂಗಳೂರಿನ ಜನತೆಗೆ ಮತ್ತೆ ಸಿಗಲಾರದು. ಸಿಕ್ಕ ಅವಕಾಶವನ್ನು ನಾಗರಿಕರು ಬಳಸಿಕೊಳ್ಳದೆ ಬಿಡಬಾರದು. ಅಯ್ಯೋ, ಇದರಿಂದ ಏನೂ ಆಗಲ್ಲ ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ. ಸಮಯ ಮಾಡಿಕೊಂಡು ಸುಂದರ ಬೆಂಗಳೂರಿನ ಬಗ್ಗೆ ನಿಮ್ಮ ಕಲ್ಪನೆಗಳನ್ನು ಬಿಡಿಎ ಕಚೇರಿಯಲ್ಲಿ ಹರವಿಟ್ಟು ಬನ್ನಿ. ಇದು ನಿಮ್ಮ ಬೆಂಗಳೂರು. ಉದ್ಯಾನ ನಗರಿಯನ್ನು ಸುಂದರವಾಗಿಸುವಲ್ಲಿ ನಮ್ಮ ಕೈವಾಡವೂ ಇರಲಿ.













Click it and Unblock the Notifications