ಬ್ಯಾಂಕ್ ಖಾತೆ ಸ್ಥಗಿತ: ಸಿಬಿಐಗೆ ಭರ್ಜರಿ ಫಸಲು
ಹೈದರಾಬಾದ್,
ಮೇ 10: ರಾಜ್ಯ ಸರಕಾರವನ್ನು ಒಪ್ಪಿಸಿ ಕೊನೆಗೂ ಸಂಸದ ವೈ.ಎಸ್. ಜಗನ್ ಮೋಹನ್ ರೆಡ್ಡಿಗೆ ಸೇರಿದ ಮಾಧ್ಯಮ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದ ಸಿಬಿಐಗೆ ಭರ್ಜರಿ ಇಳುವರಿ ಸಿಕ್ಕಿದೆ. id="toptextpromo">ಜಗನ್
ರೆಡ್ಡಿ ಒಡೆತನದ ಜಗತಿ ಪಬ್ಲಿಕೇಷನ್ಸ್, ಇಂದಿರಾ ಟಿವಿ, ಜನನಿ ಇನ್ಫ್ರಾಸ್ಟ್ರಕ್ಚರ್ ಸಮೂಹ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಎಂದು ಸಿಬಿಐ ಹೇಳಿತ್ತು. ಈ ಖಾತೆಗಳಿಂದ 103 ಕೋಟಿ ರು. ಫಿಕ್ಸೆಡ್ ಡೆಪಾಸಿಟ್ಸ್ ಸೇರಿದಂತೆ, ಸಿಬಿಐ ಒಟ್ಟು 113 ಕೋಟಿ ರೂ.ಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ಇದನ್ನು
ವಿರೋಧಿಸಿ ಸಾಕ್ಷಿ ದಿನಪತ್ರಿಕೆ ಆಡಳಿತ ಮಂಡಳಿ ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯಪಾಲರಿಗೆ ಅಲವತ್ತುಕೊಂಡಿದೆ. ಆಯೋಗವು ಮುಖ್ಯ ಕಾರ್ಯದರ್ಶಿ ಪಂಕ್ ದ್ವಿವೇದಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಜಗನ್ ಒಡೆತನದ ಸಾಕ್ಷಿ ಪತ್ರಿಕೆ 14 ಲಕ್ಷ ಪ್ರತಿಗಳ ಪ್ರಸರಣದೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಪಾರ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿದೆ. ಖಾತೆ ಸ್ಥಗಿತದಿಂದ ದೈನಂದಿನ ಕೆಲಸಕ್ಕೆ ಹೊಡೆತ ಬೀಳುತ್ತದೆ ಎಂದು ಮಂಡಳಿ ಆಯೋಗದ ಗಮನ ಸೆಳೆದಿದೆ.ಜಗತಿ
ಪಬ್ಲಿಕೇಷನ್ಸ್:
ಫಿಕ್ಸೆಡ್ ಡೆಪಾಸಿಟ್ಸ್ 103 ಕೋಟಿ ರೂ.
ಎಸ್ ಬಿಐನಲ್ಲಿ 8 ಕೋಟಿ ರೂ.
ಓರಿಯೆಂಟಲ್ ಬ್ಯಾಂಕ್ 65 ಲಕ್ಷ ರೂ.
ಇಂಡಿಯನ್ ಓವರ್ ಸೀಸ್ ಬ್ಯಾಂಕ್ 3.3 ಲಕ್ಷ ರೂ.
ಇಂದಿರಾ
ಟೆಲಿವಿಷನ್:
ಓರಿಯೆಂಟಲ್ ಬ್ಯಾಂಕ್ 91.35 ಲಕ್ಷ ರೂ.
ಜನನಿ
ಇನ್ಫ್ರಾಸ್ಟ್ರಕ್ಚರ್:
ಇಂಡಿಯನ್ ಓವರ್ ಸೀಸ್ ಬ್ಯಾಂಕ್ 45.99 ಲಕ್ಷ ರೂ.
ಓರಿಯೆಂಟಲ್ ಬ್ಯಾಂಕ್ 82,700 ರೂ.












Click it and Unblock the Notifications