ಹೈದರಾಬಾದಿನಲ್ಲಿ ನೆಲಕಚ್ಚಿದೆ ಐಟಿ ಉದ್ಯಮ

hyderabad-it-sector-is-lagging-behind
ಹೈದರಾಬಾದ್‌, ಮೇ 9: Internet penentrationನಲ್ಲಿ ಮುಂಚೂಣಿಯಲ್ಲಿರುವ ಮಿಲೇನಿಯಂ ಸಿಟಿ ಗುರ್ ಗಾಂವ್, ಭಾರತದ Silicon Valley ಬೆಂಗಳೂರನ್ನು ಪಕ್ಕಕ್ಕೆ ತಳ್ಳಿ, digital raceನಲ್ಲಿ ನಾಗಾಲೋಟದಲ್ಲಿದೆ. ಈ ಮಧ್ಯೆ, ಬೆಂಗಳೂರು ಐಟಿಗೆ ಪೆಟ್ಟುಕೊಟ್ಟು ಸ್ವಲ್ಪ ಮುಂದೆ ಸಾಗಿದ್ದ ಹೈದರಾಬಾದ್ ನೆಲಕಚ್ಚಿದೆ. ಪ್ರಸ್ತುತ ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣ ಮತ್ತಿತರ ಪ್ರಮುಖ ನಗರಗಳಲ್ಲಿ 2.7 ಲಕ್ಷ ಮಂದಿ ಟೆಕ್ಕಿಗಳು ಉದ್ಯೋಗದಲ್ಲಿದ್ದಾರೆ.

ಸಮಸ್ಯೆಗಳ ಆಗರವಾಗಿರುವ ಹೈದರಾಬಾದಿನತ್ತ ಉದ್ದಿಮೆದಾರರು ತಲೆಹಾಕುತ್ತಿಲ್ಲ. 2011ರ ಅಂತ್ಯಕ್ಕೆ ಸುಮಾರು 12 ಲಕ್ಷ ಕೋಟಿ ರು. ಬಂಡವಾಳ ಹರಿದುಬಂದಿದೆ. ಬಂಡವಾಳ ಹರಿವು ಪ್ರಮಾಣದಲ್ಲಿ ಐಟಿ ಕ್ಷೇತ್ರ (ಶೇ. 19ರಷ್ಟು ಪಾಲಿನೊಂದಿಗೆ) ತೃತೀಯ ಸ್ಥಾನದಲ್ಲಿದೆ.

ಹೀಗ್ಯಾಕೆ... 'ಮೊದಲನೆಯದಾಗಿ ರಾಜಕೀಯ ಅಸ್ಥಿರತೆ ಬಹಳಷ್ಟು ಕಾಡುತ್ತಿದೆ. ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯಲ್ಲಿ ಅಷ್ಟೊಂದು ವಿಶ್ವಾಸವಿಲ್ಲ' ಎನ್ನುತ್ತಾರೆ ಐಟಿ ಮಂದಿ. ಚಂದ್ರಬಾಬು ನಾಯ್ಡು ಕಾಲದಲ್ಲಿ ರಾಜ್ಯದಲ್ಲಿ ಐಟಿ ಉದ್ಯಮ ನಿಜಕ್ಕೂ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ಆ ನಂತರ ವೈ ಎಸ್ ರಾಜಶೇಖರ ರೆಡ್ಡಿ ಅದನ್ನು ಮುಂದುವರಿಸಿಕೊಂಡು ಹೋಗಿದ್ದರು. ಆದರೆ ಇತ್ತೀಚೆಗೆ ರಾಜ್ಯಕ್ಕೆ ದೂರದೃಷ್ಟಿಯ ಸಾರಥಿಯಿಲ್ಲದೆ ಸೊರಗುತ್ತಿದೆ ಎಂಬ ಮಾತುಗಳು ಎಲ್ಲೆಲ್ಲೂ ಕೇಳಿಬರುತ್ತಿವೆ.

ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳೂ ಕಾಣುತ್ತಿಲ್ಲ. ಆಡಳಿತಶಾಹಿಯೂ ಉದ್ಯಮರಂಗದತ್ತ ಆಸಕ್ತಿವಹಿಸುತ್ತಿಲ್ಲ. ಒಟ್ಟಾರೆಯಾಗಿ ಐಟಿ ಉದ್ಯಮ ಪೇಲವವಾಗುತ್ತಿದೆ ಎಂದು Associated Chambers of Commerce and Industry (Assocham) ಅಧ್ಯಯನ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+