ಭವಿಷ್ಯನಿಧಿ ಖಾತೆ ಸಂಖ್ಯೆಗೂ ಬಂತು portability

ಮೇಲಿನ ಅಪಾರವಾದ ಮೊತ್ತವನ್ನು ನೋಡಿದರೆ ತಿನ್ನೋಂಗಿಲ್ಲ, ಕುಡಿಯೋಂಗಿಲ್ಲ. ಸಾವಿರಾರು ಕೋಟಿ ರು. ಅಕ್ಷರಶಃ ಅನಾಥವಾಗಿ ಬಿದ್ದಿದೆ ಎಂದು ಕರಳು ಚುರುಕ್ಕೆನ್ನುತ್ತದೆ. ಎಷ್ಟು ನೌಕರರ ಬೆವರಿನ ಹನಿಗಳಿಂದ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹವಾಗಿದೆಯೋ!? ಈ ಜನರೂ ಅಷ್ಟೇ... ಜುಟ್ಟಿಗೆ ಮಲ್ಲಿಗೆಯಿರಲಿ ಎಂದು ಮೊದಲು mobile number portability ಬೇಕು ಅಂದರೆ ಹೊರತು ಕಷ್ಟಪಟ್ಟು ತಾವು ದುಡಿದ ಹಣವನ್ನು ಸಂರಕ್ಷಿಸಿಕೊಳ್ಳಲು ಅಂತಹ ವ್ಯವಸ್ಥೆಯೊಂದು ಬೇಕು ಎಂದು ಆಗ್ರಹಿಸಲಿಲ್ಲ. ಮಂಡಳಿಯೂ ಅದರತ್ತ ಆಲೋಚಿಸಲಿಲ್ಲ.
ಆದರೆ ಈಗ, 2012ರ ಅಂತ್ಯಕ್ಕೆ ಇಂತಹ ಅನಾಥ ಖಾತೆಗಳಿಗೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ EPFO ಮಂಡಳಿ ಎಲ್ಲ ಸದಸ್ಯರಿಗೂ Provident Fund Number Portability ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದೆ. ಆದರೆ ಹಿಂದಿನ ಖಾತೆಗಳು ಊರ್ಜಿತವಾಗಿ ಅಂದರೆ 15,000 ಕೋಟಿ ರು. ಅನಾಥ ಹಣ ಮತ್ತೆ ನೌಕರರ ಖಾತೆಗಳಿಗೆ ವರ್ಗವಾಗುವುದಿಲ್ಲ. ಬದಲಿಗೆ ಭವಿಷ್ಯದಲ್ಲಿ ಅಂತಹ ಪ್ರಮೇಯ ಉದ್ಭವವಾಗುವುದಿಲ್ಲ.
Provident fund number portability ವ್ಯವಸ್ಥೆಯಲ್ಲಿ ಪ್ರತಿ ನೌಕರನಿಗೂ (ಅಂದರೆ ಮಂಡಳಿಯ 4.4 ಕೋಟಿ ಸದಸ್ಯರಿಗೆ) ವಿಶೇಷ ನಂಬರ್ ನೀಡಲಾಗುವುದು. ನೌಕರರು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹಾರುವಾಗ ಹಳೆಯ ಕಂಪನಿಯಲ್ಲಿನ ಖಾತೆಯನ್ನು ಹಾಗೆ ಬಿಟ್ಟುಬಿಡುವುದರಿಂದ ಅನಾಥ ಖಾತೆಗಳು ಸೃಷ್ಟಿಯಾಗುತ್ತಿದ್ದವು. ಆದರೆ ಇನ್ನು ಮುಂದೆ ಕಂಪನಿ ಬದಲಾದರೂ PF ಖಾತೆ ಸಂಖ್ಯೆ ಬದಲಾಗದು. ಅಷ್ಟರಮಟ್ಟಿಗೆ ಜೀವನಪರ್ಯಂತ PF ಖಾತೆ ಮತ್ತು ಅದರಲ್ಲಿನ ಹಣವನ್ನು ಸುರಕ್ಷಿತವಾಗಿ ತಮ್ಮೊಂದಿಗೆ ಕೊಂಡೊಯ್ಯಬಹುದು.
ಕುತೂಹಲದ ವಿಷಯವೆಂದರೆ, ಬ್ಯಾಂಕುಗಳಲ್ಲಿಯೂ ಹೀಗೆ ಸಾವಿರಾರು ಕೋಟಿ ರು. ಅನಾಥವಾಗಿ ಕೊಳೆಯುತ್ತಾ ಬಿದ್ದಿದೆ. ಆದರೆ ಬ್ಯಾಂಕ್ ಖಾತೆಗಳಿಗೂ ಸದ್ಯದಲ್ಲೇ ಈ number portability ವ್ಯವಸ್ಥೆ ಕಾಣಿಸಿಕೊಳ್ಳಲಿದೆ. ಈ ಮಧ್ಯೆ, ಪ್ರಸಕ್ತ ಆರ್ಥಿಕ ವರ್ಷಕ್ಕೆ ಪಿಎಫ್ ಬಡ್ಡಿದರವನ್ನು ಶೇ. 8.25ಕ್ಕೆ ನಿಗದಿಪಡಿಸಿದೆ.












Click it and Unblock the Notifications