ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಸಂಬಳ ಕಡಿತಕ್ಕೆ ಮದ್ದು ಹುಡುಕುತ್ತಾ...

By Mahesh
|
Google Oneindia Kannada News

Infosys may roll back Hike Freeze
ಬೆಂಗಳೂರು, ಮೇ.9: ಜಾಗತಿಕವಾಗಿ ಐದನೇ ಅತಿದೊಡ್ಡ ಸಾಫ್ಟ್ ವೇರ್ ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶ ನಂತರ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಸಂಬಳ ಕಡಿತ, variable pay cut ವಿರುದ್ಧ ಇನ್ಫಿ ಉದ್ಯೋಗಿಗಳು ಬ್ಲಾಗ್, ಸಾಮಾಜಿಕ ಜಾಲ ತಾಣಗಳ ಮೂಲಕ ಕಿಡಿಕಾರಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಇನ್ಫೋಸಿಸ್ ಆಡಳಿತ ಮಂಡಳಿ ಸಂಬಳ ಕಡಿತಕ್ಕೆ ಮದ್ದು ಹುಡುಕುವಲ್ಲಿ ನಿರತವಾಗಿದೆ. ಕಳೆದ ಒಂದು ತಿಂಗಳಲ್ಲಿ ಪ್ರತಿ ವಾರ ಉನ್ನತ ಅಧಿಕಾರಿಗಳು ಸಭೆ ಸೇರಿಸಿ ಉದ್ಯೋಗಿಗಳ ಅಸಹಕಾರ, ಸಂಬಳ ಕಡಿತ ಹಿಂಪಡೆಯುವ ಬಗ್ಗೆ ಚರ್ಚಿಸುತ್ತಿದ್ದಾರೆ.

ಜಾಗತಿಕವಾಗಿ ಯುಕೆ,ಯುಎಸ್ ನಲ್ಲಿ ಒಂದಷ್ಟು ಪ್ರಗತಿ ಕಂಡ ನಂತರ ಭಾರತದ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆಯಿದ. ಯುಕೆಯಲ್ಲಿ ನೇಮಕಾತಿ ಕಡಿತಗೊಳಿಸಿ ಅಂಪ್ರೈಟಿಸ್ ಮಾದರಿಗೆ ಮೊರೆ ಹೋಗಲಾಗಿದೆ. ಉದ್ಯೋಗಿಗಳ ನಿರ್ವಹಣ ವೆಚ್ಚ ಸರಿದೂಗಿಸಿದ ಮೇಲೆ ಸಂಬಳ ಏರಿಕೆ ಬಗ್ಗೆ ಚಿಂತಿಸಬಹುದು ಎಂದು ಸಿಎಫ್ ಒ ವಿ ಬಾಲಕೃಷ್ಣನ್ ಹೇಳಿದ್ದಾರೆ.

ಸುಮಾರು 1.49 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಕಳೆದ ವರ್ಷ ಕಂಪನಿ ತನ್ನ ಉದ್ಯೋಗಿಗಳಿಗೆ ಶೇ. 10-12ರಷ್ಟು hike ನೀಡಿತ್ತು. ಆದರೆ, ಈ ಬಾರಿಯ ವೇತನ ಕಡಿತವನ್ನು ಸಮರ್ಥಿಸಿಕೊಂಡಿದ್ದ ಹಿರಿಯ ಉಪಾಧ್ಯಕ್ಷೆ ಹಾಗೂ HR ಸಮೂಹದ ಮುಖ್ಯಸ್ಥೆ ನಂದಿತಾ ಗುರ್ಜಾರ್, ಉದ್ಯೋಗಿಗಳು ಸಂಸ್ಥೆಯ ನಿರ್ಣಯಕ್ಕೆ ಸಹಕರಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದರು.

ಆದರೆ, ಕಂಪನಿಯ ಹಿರಿಯ ಅಧಿಕಾರಿಗಳ ಸಮರ್ಥನೆಗೆ ಮಾಜಿ ಹಾಗೂ ಹಾಲಿ ಉದ್ಯೋಗಿಗಳು ಭಾರಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಸಂಬಳ ಕಡಿತ, ಇಂಗ್ರಿಮೆಂಟ್ ನೀಡಿದಿರುವ ಇನ್ಫೋಸಿಸ್ attrition ಪ್ರಮಾಣ ಹೆಚ್ಚಾಗಲಿದ್ದು, ಹೆಚ್ಚಿನ ಸಿಬ್ಬಂದಿ ಸಂಸ್ಥೆ ತೊರೆದರೆ ಅಚ್ಚರಿ ಏನಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದರು.

ಇದರಿಂದ ಎಚ್ಚೆತ್ತುಕೊಂಡ ಇನ್ಫೋಸಿಸ್ ಆಡಳಿತ ಮಂಡಳಿ ತನ್ನ ಅಮೂಲ್ಯ ಮಾನವ ಸಂಪನ್ಮೂಲವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಸಂಬಳ ಏರಿಕೆ ತಕ್ಷಣಕ್ಕೆ ಸಿಗದಿದ್ದರೂ ಎಲ್ಲಾ ರೀತಿ ಕಡಿತ ನಿಲ್ಲಿಸುವ ಸಾಧ್ಯತೆಯಿದೆ ಎನ್ನಬಹುದು. ಹೆಚ್ಚಿನ ವಿವರಗಳಿಗೆ ಕಾದು ನೋಡಿ..

English summary
Infosys likely to revoke its decision to withhold pay hikes for employees. "We will give a raise when we have more comfort on business," said chief financial officer V. Balakrishnan, Top level meeting held to decised on the issue. But no official confirmation yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X