ಸದಾನಂದ ಗೌಡ, ಕುಮಾರಣ್ಣ, ಶಕುಂತಲಾ ಸಮ್ಮಿಲನ

ಮುಖ್ಯಮಂತ್ರಿಯಾಗಿ ತವರೂರಿಗೆ ಟೈರ್ ಫ್ಯಾಕ್ಟರಿ ಕೊಡುಗೆ ನೀಡಲು ಶ್ರಮಿಸುತ್ತಿರುವ ಸದಾನಂದ ಗೌಡರು, ಪುತ್ತೂರಿನಲ್ಲಿ ಒಕ್ಕಲಿಗ ಗೌಡ ಸಂಘದ ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ಕುಮಾರಣ್ಣನ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಮನಸಾರೆ ಹರಟಿದ್ದಾರೆ. ಇದಕ್ಕೆ ಹಿರಿಯ ಕಾಂಗ್ರೆಸ್ಸಿಗ ಬಿ ಎಲ್ ಶಂಕರ್ ಸಾಕ್ಷಿಯಾಗಿದ್ದರು ಎಂಬುದು ವಿಶೇಷ. ಬಳಿಕ, ಅಲ್ಲಿಂದ ಸದಾನಂದ ಮತ್ತು ಕುಮಾರಣ್ಣ ಇಬ್ಬರೂ ತಮ್ಮ ತಮ್ಮ ಹಾದಿ ಹಿಡಿದು ಬೇರ್ಪಟ್ಟಿದ್ದಾರೆ. ಆದರೆ ಎಚ್ ಡಿ ಕುಮಾರಸ್ವಾಮಿ ಅವರು...
ಮೊದಲೇ ಕಾರ್ಯಕ್ರಮ ಫಿಕ್ಸ್ ಮಾಡಿ, ಅದೇ ಊರಿನವರಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ. ರಾಜಕೀಯ ವಲಯದಲ್ಲಿ ಇದು ಅನೇಕರ ಹುಬ್ಬೇರಿಸಿದೆ. ಪುತ್ತೂರಿನಲ್ಲಿ ಗೌಡ ಸಂಘದ ವಾರ್ಷಿಕ ಸಮಾವೇಶಕ್ಕೆಂದು ಆಗಮಿಸಿದ್ದ ಕುಮಾರಸ್ವಾಮಿ ಅವರು, ಬೆಳಗಿನ ಟಿಫಿನ್ ಅನ್ನು ಶಕುಂತಳಾ ಅವರ ಮನೆಯಲ್ಲಿ ಸೇವಿಸಲು ಕುಂತೂರಿನ ಅವರ ಮನೆಗೆ ಭೇಟಿ ನೀಡಿದ್ದರು.
ಸುಮಾರು ಒಂದೂವರೆಗ ಗಂಟೆಯಷ್ಟು ಮಾತುಕತೆ ನಡೆಸಿದ ಅವರು 'ಸೌಹಾರ್ದ ನೆಲೆಯಲ್ಲಿ ಶಕುಂತಲಾರನ್ನು ಭೇಟಿಯಾಗಿದ್ದೆ ಅಷ್ಟೇ. ಅದಕ್ಕೆ ಯಾವುದೇ ರಾಜಕೀಯ ಬಣ್ಣ ಬಳಿಯಬೇಡಿ' ಎಂದು ಸುದ್ದಿಗಾರರಲ್ಲಿ ವಿನಂತಿಸಿದರು. ಆದರೆ ಅದಕ್ಕೂ ಮುನ್ನ ಶಕ್ಕು ಅಕ್ಕ ಮನೆಯಲ್ಲಿ ಭಾನುವಾರ ಬೆಳಗ್ಗೆ ಭರ್ಜರಿಯಾಗಿ ಕರಾವಳಿಯ ಕೋಳಿ ಪದಾರ್ಥವನ್ನು ಇಡ್ಲಿಯ ಜತೆ ಸವಿದಿದ್ದಾರೆ. ಬಳಿಕ, 'ಉಪಹಾರವೂ ಚೆನ್ನಾಗಿತ್ತು, ಅಕ್ಕನೊಂದಿಗೆ ಭೇಟಿಯೂ ಚೆನ್ನಾಗಿತ್ತು' ಎಂದು ಕುಮಾರಣ್ಣ ವಗ್ಗರಣೆ ಹಾಕಿದ್ದಾರೆ.
ಆದರೆ ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ ತವರು ಭೇಟಿ ಕಾಲೇ ... ಆಪ್ಪಿತಪ್ಪಿಯೂ ಶಕ್ಕು ಅಕ್ಕನನ್ನು ನೆನಪಿಸಿಕೊಂಡಿಲ್ಲ.












Click it and Unblock the Notifications