ರಾಷ್ಟ್ರಪತಿ ರೇಸ್: ಪ್ರಣಬ್ ಮುಖರ್ಜಿ ಮುಂದೆ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಮಮತಾ ಬ್ಯಾನರ್ಜಿ ಅವರು, ಪ್ರಣಬ್ ಅವರು ರಾಷ್ಟ್ರಪತಿಯಾಗಲು ನಮ್ಮ ಪಕ್ಷದಿಂದ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ.
ನಂತರ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರೊಡನೆ ಮಾತನಾಡಿದ ಮಮತಾ ಬ್ಯಾನರ್ಜಿ ಮತ್ತೊಂದು ದಾಳ ಕೂಡಾ ಉರುಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಉಪ ರಾಷ್ಟ್ರಪತಿ ಸ್ಥಾನಕ್ಕೆ ತಾವು ಸೂಚಿಸಿದ ಅಭ್ಯರ್ಥಿಗಳು ನಿಲ್ಲಿಸುವಂತೆ ಬೇಡಿಕೆ ಮುಂದಿಡುವ ಸಾಧ್ಯತೆ ಹೆಚ್ಚಿದೆ.
ಇಲ್ಲಿವರೆಗೂ ಅಬ್ದುಲ್ ಕಲಾಂ ಪರ ನಿಲುವು ತಳೆದಿದ್ದ ಎಸ್ ಪಿ ಈಗ ಪ್ರಣಬ್ ಪರ ವಾಲುವಂತೆ ಮಾಡುವಲ್ಲಿ ಮಮತಾ ತಮ್ಮ ಬುದ್ಧಿಯನ್ನು ಖರ್ಚು ಮಾಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಮಮತಾ ನಂತರ ಎಐಎಡಿಎಂಕೆ ನಾಯಕಿ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತ ಎಡಪಕ್ಷಗಳು ಕೂಡಾ ಅನ್ಸಾರಿ ಅಥವಾ ಪ್ರಣಬ್ ರಲ್ಲಿ ಯಾರಾದರೂ ರಾಷ್ಟ್ರಪತಿಯಾಗಲಿ ನಮ್ಮ ಅಭ್ಯಂತರ ಏನು ಇಲ್ಲ ಎಂದು ಹೇಳಿದೆ. ಇಷ್ಟಕ್ಕೂ ಅನುಭವಿ ರಾಜಕಾರಣಿ ಪ್ರಣಬ್ 'ರಬ್ಬರ್ ಸ್ಟಾಂಪ್' ರಾಜಕಾರಣಿಯಾಗಬೇಕಾ? ಪ್ರಣಬ್ ಸಕ್ರಿಯ ರಾಜಕೀಯಕ್ಕೆ ಕಾಂಗ್ರೆಸ್ ಕೊಡಲಿ ಪೆಟ್ಟು ನೀಡುತ್ತಿದೆಯೇ? ಮುಂದೆ ನಿರೀಕ್ಷಿಸಿ...












Click it and Unblock the Notifications