ರೈಲ್ವೆ ಫ್ಲಾಟ್ ಫಾರ್ಮ್ ಟಿಕೆಟ್ ಇನ್ಮೇಲೆ 5 ರು

ಫ್ಲಾಟ್ ಫಾರ್ಮ್ ಟಿಕೆಟ್ ಪಡೆದವರು 2 ಗಂಟೆಗಳ ಕಾಲ ರೈಲ್ವೆ ನಿಲ್ದಾಣದಲ್ಲಿರಬಹುದು. ರೈಲ್ವೇ ದರ ಏರಿಕೆ ಮಾಡಿದ್ದ ದಿನೇಶ್ ತ್ರಿವೇದಿ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿರುಗಿಬಿದ್ದಿದ್ದರು.
ತ್ರಿವೇದಿ ರೈಲ್ವೇ ಸಚಿವ ಸ್ಥಾನ ತೊರೆದ ಮೇಲೆ ಹೊಸ ಸಚಿವ ಮುಕುಲ್ ರಾಯ್ ಅವರು ಪ್ರಯಾಣ ದರ ತಗ್ಗಿಸಿದ್ದರು. ಆದರೆ, ಫ್ಲಾಟ್ ಫಾರ್ಮ್ ಬೆಲೆ ಇಳಿಸಲಿಲ್ಲ.
ಫ್ಲಾಟ್ ಫಾರ್ಮ್ ಟಿಕೆಟ್ ಬೆಲೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಟಿಕೆಟ್ ವೆಂಡಿಂಗ್ ಮೆಷಿನ್ ಗಳ ತಂತ್ರಾಂಶ ಕೂಡಾ ಬದಲಿಸಬೇಕಾಗಿದೆ. ಈ ಕಾರ್ಯಕ್ಕೆ ಕೊಂಚ ಸಮಯ ಹಿಡಿಯುವುದರಿಂದ ಸದ್ಯಕ್ಕೆ ಹಳೆ ಟಿಕೆಟ್ ಗಳನ್ನು ನೀಡಲಾಗುತ್ತಿದೆ ಎಂದು ಬೆಂಗಳೂರಿನ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಫ್ಲಾಟ್ ಫಾರ್ಮ್ ಟಿಕೆಟ್ ಹೆಚ್ಚಳದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಇದ್ದೇ ಇದೆ.












Click it and Unblock the Notifications