ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿ ಸುಟ್ಟು ಕೊಂದ ಗಂಡ

25 ವರ್ಷ ವಯಸ್ಸಿನ ಅನಿತಾ ಮೃತಪಟ್ಟಿರುವ ದುರ್ದೈವಿ. ಹಿಂದೂಪುರದ ಮುರಳಿಕೃಷ್ಣ ಅವರ ಮಗಳಾಗಿರುವ ಅನಿತಾಳನ್ನು 7 ವರ್ಷಗಳ ಹಿಂದೆ ರಾಘವೇಂದ್ರ ಎಂಬುವವರು ಮದುವೆಯಾಗಿದ್ದರು. ಇಬ್ಬರಿಗೂ 5 ವರ್ಷದ ಮಗುವಿದೆ. ಅನಿತಾ 2ನೇ ಮಗುವಿನ ಗರ್ಭಿಣಿಯಾಗಿದ್ದರು.
ಅನಿತಾಳ ತಂಗಿ ಗಂಡನಿಗೆ ನನಗಿಂತ ಹೆಚ್ಚಿಗೆ ವರದಕ್ಷಿಣೆ ಸಿಕ್ಕಿದೆ. ನಿಮ್ಮಪ್ಪ ನನಗೆ ಯಾಕೆ ಹಣ ಕೊಟ್ಟಿಲ್ಲ. ತವರುಮನೆಗೆ ಹೋಗಿ ತೆಗೆದುಕೊಂಡು ಬಾ ಎಂದು ರಾಘವೇಂದ್ರ ತನ್ನ ಹೆಂಡತಿಯನ್ನು ದಬಾಯಿಸಿ ಕೇಳಿದ್ದಾನೆ.
ಆದರೆ, ಅನಿತಾ ನಿರಾಕರಿಸಿ, ರಾಘವೇಂದ್ರನ ಮಾತನ್ನು ನಿರ್ಲಕ್ಷಿಸಿದ್ದಾಳೆ. ಇದರಿಂದ ಕೋಪಗೊಂಡ ರಾಘವೇಂದ್ರ ಏಕಾಏಕಿ ಅನಿತಾಳ ಮೇಲೆ ಸೀಮೆಎಣ್ಣೆ ಸೂರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಶೇ.90ರಷ್ಟು ಸುಟ್ಟಗಾಯಗಳಾಗಿದ್ದ ಅನಿತಾಳನ್ನು ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ವಿಷಯ ತಿಳಿದ ಕೊರಟಗೆರೆ ಪೊಲೀಸರು, ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications