ಸುಪ್ರೀಂ CEC: ಯಡಿಯೂರಪ್ಪಗೆ ಸದ್ಯಕ್ಕೆ ಜೀವದಾನ
ಬೆಂಗಳೂರು,
ಏ.30: ಗಣಿ ಅಕ್ರಮ ಮತ್ತು ಅಕ್ರಮ ಭೂ ಡಿನೋಟಿಫಿಕೇಷನ್ ಪ್ರಕರಣಗಳನ್ನು ಸಿಬಿಐ ನಂತಹ ಸಂಸ್ಥೆಗೆ ತನಿಖೆಗೆ ಒಪ್ಪಿಸಬೇಕು ಎಂಬ CEC ಶಿಫಾರಸ್ಸು ಬಗ್ಗೆ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿಲ್ಲ. id="toptextpromo">ಏಪ್ರಿಲ್
20ರಂದು CEC ಸಲ್ಲಿಸಿದ್ದ ಶಿಫಾರಸ್ಸಿನ ಬಗ್ಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಹಸಿರು ಪೀಠಕ್ಕೆ ಸೋಮವಾರ ವಿಚಾರಣೆ ನಡೆಸಲಾಗದೆ ಮೇ 4ಕ್ಕೆ ಮುಂದೂಡಿತು. ಹಸಿರು ಪೀಠದ ನ್ಯಾಯಮೂರ್ತಿಗಳ ಕಾರ್ಯದೊತ್ತಡದಿಂದ ಇಂದು ವಿಚಾರಣೆ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು, ಮೇ 4ರಂದು ಪೀಠವು ವಿಚಾರಣೆಯನ್ನು ಕೈಗೆತ್ತಿಕೊಂಡು ಅಂದೇ ತನ್ನ ತೀರ್ಪನ್ನು ಪ್ರಕಟಿಸುವುದು ಅನುಮಾನವಾಗಿದೆ. id='are-slot-1' class='oiad oi-axt oiadv'> id='top-searched-articles'>ಹಾಗಾದಲ್ಲಿ
ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಲ್ಪಡುತ್ತದೆ. ಏಕೆಂದರೆ ಮೇ ಮತ್ತು ಜೂನ್ ನಲ್ಲಿ ಸುಪ್ರೀಂಕೋರ್ಟಿಗೆ ಬೇಸಿಗೆ ರಜೆ ಇರುತ್ತದೆ. ಅಲ್ಲಿಗೆ ಯಡಿಯೂರಪ್ಪ ಅವರು ಇನ್ನೊಂದೆರಡು ತಿಂಗಳು ನಿರಾಳರಾಗಿರಬಹುದು.











Click it and Unblock the Notifications