ಜಗನ್ ಸಾಕ್ಷಿಗೆ ಬಿಡಿಗಾಸು ಜಾಹೀರಾತೂ ನೀಡಬೇಡಿ

ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಒಡೆತನದ ಜಗತಿ ಗ್ರೂಪ್ ಆಫ್ ಕಂಪನೀಸ್ ಗೆ ಸರಕಾರದ ವತಿಯಿಂದ ಒಂದು ನಯಾ ಪೈಸೆ ಜಾಹೀರಾತೂ ನೀಡಬಾರದು ಎಂದು ಫರ್ಮಾನು ಹೊರಡಿಸಿದೆ. ಇದು ನಿಜಕ್ಕೂ ಅಪರೂಪವೇ. ಆದರೆ ಇದಕ್ಕೆ ನಿರ್ದಿಷ್ಟ, ಸಕಾರಣ ಇದೆಯಾ ಅಂದರೆ ಜಗನ್ ಕಣ್ಣು ಶೂನ್ಯ ನೋಟದತ್ತ ಹೊರಳುತ್ತದೆ.
ಆದಾಗ್ಯೂ, ತೆಲುಗು ಭಾಷೆಯ ಸಾಕ್ಷಿ ದಿನಪತ್ರಿಕೆ ಮತ್ತು ಸಾಕ್ಷಿ ಚಾನೆಲ್ ಗೆ ಯಾವುದೇ ಜಾಹೀರಾತು ನೀಡದಂತೆ ಆಂಧ್ರದ ವಾರ್ತಾ ಇಲಾಖೆ ಪ್ರಸ್ತಾವನೆಯೊಂದನ್ನು ರಜಾ ದಿನವಾದ ಭಾನುವಾರ ಸರಕಾರಕ್ಕೆ ಕಳಿಸಿದೆ.
ಅಸಲಿಗೆ ಜಗತಿ ಗ್ರೂಪ್ ಆಫ್ ಕಂಪನೀಸ್ ಸ್ಥಾಪನೆಯಾಗಿರುವುದೇ ಅಕ್ರಮ ಹಣದಿಂದ. ಸಿಬಿಐ ಈಗಾಗಲೇ ಪ್ರಕರಣದ ಸಂಬಂಧ ಸಲ್ಲಿಸಿರುವ ಆರೋಪಪಟ್ಟಿಯಲ್ಲೂ ಇದನ್ನೇ ದಾಖಲಿಸಿದೆ. ಹಾಗಾಗಿ, ಅಕ್ರಮ ಕಂಪನಿಗೆ ಸರಕಾರದ ವತಿಯಿಂದ ಆರ್ಥಿಕ ನೆರವು ನೀಡುವುದು ಸರ್ವಥಾ ಸಾಧುವಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಸರಕಾರ ಅಧಿಸೂಚನೆ ಹೊರಡಿಸುವ ಲಕ್ಷಣಗಳು ದಟ್ಟವಾಗಿವೆ.












Click it and Unblock the Notifications