ಏ.27ರಂದು ಕೆಎಸ್ಸಾರ್ಟಿಸಿ ಮುಷ್ಕರ ಇಲ್ಲ

ಕೆಎಸ್ಸಾರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕಾರ್ಮಿಕ ಸಂಘಟನೆಗಳು ಶುಕ್ರವಾರ, ಏ.27ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದವು. ಆದರೆ, ಆರು ಕಾರ್ಮಿಕ ಸಂಘಗಳ ಜಂಟಿ ಕಾರ್ಯಕಾರಿ ಸಮಿತಿ ಜೊತೆ ಕೆಎಸ್ಸಾರ್ಟಿಸಿ ನಿಗಮ ಆಡಳಿತ ವರ್ಗದ ಜೊತೆ ನಡೆದ ಮಾತುಕತೆ ಫಲಪ್ರದವಾಗಿದೆ. ಈ ಎಲ್ಲಾ ಸಂಸ್ಥೆಯ ಲಕ್ಷಾಂತರ ನೌಕರರು ಅನಿರ್ಧಿಷ್ಟ ಕಾಲ ಮುಷ್ಕರ ಕೈ ಬಿಟ್ಟು, ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ನಿಗಮ ಪ್ರಕಟಿಸಿದೆ.
ಉದ್ದೇಶಿತ ಮುಷ್ಕರಕ್ಕೆ AITUC, CITU, Indian National Trade union congress (INTUC), ಎಸ್ ಸಿ/ಎಸ್ ಟಿ ಸಂಘಟನೆ ಬೆಂಬಲ ವ್ಯಕ್ತಪಡಿಸಿತ್ತು.
ಪ್ರಯಾಣ ದರ, ನೌಕರರ ಸಂಬಳ ಏರಿಕೆ, ವೇತನ ವ್ಯತ್ಯಯ ಮುಂತಾದ ಕಾರಣ ಮುಂದಿಟ್ಟುಕೊಂಡು ಮುಷ್ಕರ ಹೂಡಲು 1,10,000ಕ್ಕೂ ಅಧಿಕ ಚಾಲಕರು, ನಿರ್ವಾಹಕರು ಮುಂದಾಗಿದ್ದರು.












Click it and Unblock the Notifications