ಮೈಸೂರಿನಲ್ಲಿ ನಾಪತ್ತೆಯಾಗಿದ್ದ ವರ, ಶವವಾಗಿ ಪತ್ತೆ

ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಕುಂಬಾರ ಕೊಪ್ಪಲಿನ ನಿವಾಸಿ ಪುಟ್ಟಮಾದಯ್ಯ ಮತ್ತು ಕಮಲಮ್ಮ ದಂಪತಿ ಪುತ್ರಿ ಮಮತಾರೊಂದಿಗೆ ಪ್ರಸನ್ನಕುಮಾರನ ವಿವಾಹ ಏ.23ರಂದು ನಡೆಸಲು ನಿಶ್ಚಯಿಸಿದ್ದರು.
ಮದುವೆ ಹಿಂದಿನ ದಿನ ವರ ಮತ್ತು ವರನ ಕಡೆಯವರು ಕಲ್ಯಾಣ ಮಂಟಪಕ್ಕೆ ಬಂದಿರಲಿಲ್ಲ. ವರನಿಗೆ ವರದಕ್ಷಿಣೆ ರೂಪದಲ್ಲಿ 1 ಲಕ್ಷ ರೂ., 75ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಆತಂಕಗೊಂಡ ವಧುವಿನ ಕಡೆಯವರು ವರನ ಊರು ಕೆಆರ್ ನಗರಕ್ಕೆ ತೆರಳಿ ವಿಚಾರಿಸಿದ್ದರು. ವರನ ಕಡೆಯವರು ಕೂಡಾ ಪ್ರಸನ್ನ ಎಲ್ಲಿದ್ದಾನೆ ಗೊತ್ತಿಲ್ಲ ಎಂದಿದ್ದರು. ವಧುವಿನ ಸಂಬಂಧಿಕರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೆು.
75 ಸಾವಿರ ರೂ. ನಗದು, ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿದೆ. ಉಳಿದ ಹಣ ಮತ್ತು ಬೈಕನ್ನು ಮದುವೆಯ ದಿನ ಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ, ವರ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಆತ್ಮಹತ್ಯೆಯೋ, ಕೊಲೆಯೋ? : ದೂರು ದಾಖಲಿಸಿಕೊಂಡ ಮೆಟಗಳ್ಳಿ ಪೊಲೀಸರು ಪ್ರಸನ್ನನಿಗಾಗಿ ಹುಡುಕಾಟ ನಡೆಸಿದ್ದರು. ಕೆಆರ್ ಎಸ್ ಹಿನ್ನೀರಿನಲ್ಲಿ ಆತನ ಶವ ಪತ್ತೆಯಾಗಿದೆ.
ಪ್ರಸನ್ನಕುಮಾರ್‌ಗೆ ಒಬ್ಬ ತಂಗಿ ಇದ್ದು, ಮನೆಯವರ ಒಪ್ಪಿಗೆ ಇಲ್ಲದೆ ಪ್ರೇಮ ವಿವಾಹ ಮಾಡಿಕೊಂಡಿದ್ದಾಳೆ. ಇದು ಪ್ರಸನ್ನನನ್ನು ಕೆರಳಿಸಿದೆ. ತನ್ನ ಮದುವೆಗೆ ತಂಗಿ ಬಂದರೆ ನಾನು ಮದುವೆ ಮನೆಗೆ ಬರುವುದಿಲ್ಲ ಎಂದು ವಧು ಮಮತಾ ಜೊತೆ ಪ್ರಸನ್ನ ಹೇಳಿದ್ದ ಎನ್ನಲಾಗಿದೆ.
ಆದರೆ, ತಂಗಿ ಮದುವೆಗೆ ಬರುವುದು ನಿನ್ನೆ ಖಚಿತವಾದ ಮೇಲೆ, ಪ್ರಸನ್ನನಿಗೆ ತನ್ನ ಮನೆಯವರ ಮೇಲೆ ಬೇಸರ, ಜಿಗುಪ್ಸೆ ಉಂಟಾಗಿದೆ. ನಂತರ ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ. ಮೆಟಗಳ್ಳಿ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದಿದ್ದಾರೆ.











Click it and Unblock the Notifications