ಕೇರಳದಲ್ಲಿ ಸಂಪೂರ್ಣ ಸಾಕ್ಷರತೆಯೇ- ನೋ ಛಾನ್ಸ್
ತಿರುವನಂತಪುರಂ,ಏ.20: ದೇವರನಾಡು ಕೇರಳ ನಿಜಕ್ಕೂ ಸರಸ್ವತಿ ದೇವಿಯ ತವರೂರು ಆಗಿದೆಯಾ!? ಅಂದರೆ ಕೇರಳ ಸಂಪೂರ್ಣ ಸಾಕ್ಷರತೆಯ ರಾಜ್ಯವಾ? ಅಂದರೆ ಕೇರಳದಲ್ಲಿ ಪ್ರತಿಯೊಬ್ಬರೂ ಸಾಕ್ಷರರೇ? - ನೋ ಛಾನ್ಸ್ ಎನ್ನುತ್ತಿದೆ ತಾಜಾ ವರದಿಯೊಂದು.
ಏಕೆಂದರೆ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 2.2 ಲಕ್ಷ ಮಂದಿ ಇನ್ನೂ ಹೆಬ್ಬೆಟ್ಟುಗಳೇ ಆಗಿದ್ದಾರೆ. ಪರಿಶಿಷ್ಟ ಜಾತಿಯ ಬಗ್ಗೆ ಅಧ್ಯಯನ ವರದಿ ಸಿದ್ದಪಡಿಸುವಾಗ ಈ ಮಾಹಿತಿ ಅಚಾನಕ್ಕಾಗಿ ಬಹಿರಂಗವಾಗಿದೆ. ಆತಂಕದ ವಿಷಯವೆಂದರೆ ಪರಿಶಿಷ್ಟ ಜಾತಿಯವರಲ್ಲಿ ಸಾಕ್ಷರತೆ ಹೆಚ್ಚಾಗುವ ಬದಲು ಅನಕ್ಷರತೆ ವೃದ್ಧಿಸುತ್ತಿದೆ.
ಪರಿಶಿಷ್ಟ ಜಾತಿಯವರು ಸಾಕ್ಷರರಾಗಲು ತೊಡಕಾಗಿರುವುದು ಬಡತನವೆನ್ನಬಹುದು. ಏಕೆಂದರೆ ಶೇ. 66ರಷ್ಟು ಪರಿಶಿಷ್ಟ ಜಾತಿಯವರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇವರಿಗೆ ಕೃಷಿಗಾಗಿ ತಮ್ಮದೇ ಆದ ಭೂಮಿಯೂ ಇಲ್ಲ. ರಾಜ್ಯದಲ್ಲಿ ಒಟ್ಟು 14.5 ಲಕ್ಷ ಮಂದಿ ಪರಿಶಿಷ್ಟ ಜಾತಿಯವರು ಒಟ್ಟು 29,000 ಎಕರೆ ಜಮೀನು ಹೊಂದಿದ್ದಾರೆ. ಸುಮಾರು 2.5 ಲಕ್ಷ ಪರಿಶಿಷ್ಟ ಜಾತಿಯವರು ಒಂದೇ ಕೊಠಡಿಯಿರುವ ಮನೆಗಳಲ್ಲಿ ವಾಸಿಸುತ್ತಿದ್ದಾರೆ.












Click it and Unblock the Notifications