ನ್ಯೂಸ್ ಚಾನೆಲ್ ಬಂದ್ ಕರೋ ಎಂದ ಮಮತಾ

ಸಾರ್ವಜನಿಕರು ಯಾವ ಟಿವಿ ಚಾನೆಲ್ ನೋಡಬೇಕು ಯಾವುದನ್ನು ನೋಡಬಾರದು ಎಂಬುದನ್ನು ಮಮತಾ ನಿರ್ಧರಿಸುತ್ತಾರಂತೆ. ನ್ಯೂಸ್ ಚಾನೆಲ್ ಗಳನ್ನು ನೋಡುವುದು ಬಿಡಿ. ಮನರಂಜನೆ ಚಾನೆಲ್ ಗಳನ್ನು ನೋಡಿ ಎಂದು ಮಮತಾ ಇತ್ತೀಚೆಗೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ತಮ್ಮ ಸರ್ಕಾರದ ಆಡಳಿತವನ್ನು ಕೆಟ್ಟದಾಗಿ ಬಿಂಬಿಸುತ್ತಿರುವ ಟಿವಿ ಚಾನೆಲ್ ಗಳ ಮೇಲೆ ಮಮತಾ ಕಿಡಿಕಾರಿದರು. ನ್ಯೂಸ್ ಚಾನೆಲ್ ಬದಲು ಯಾವುದಾದರೂ ಮ್ಯೂಸಿಕ್ ಚಾನೆಲ್ ನೋಡಿ ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಬೆಂಗಾಳದಲ್ಲಿ ಭೂ ಮಾಫಿಯಾ ಅಧಿಕವಾಗುತ್ತಿದೆ. ಹಾಗಾಗಿ ಸರ್ಕಾರದ ಮೇಲೆ ವಿವಿಧ ರೀತಿಯಿಂದ ಒತ್ತಡ ಹೇರಲಾಗುತ್ತಿದೆ. ರೈತರ ಜಾಗವನ್ನು ಕಿತ್ತುಕೊಂಡು ಎಸ್ ಇಜಡ್ ಗೆ ಮೀಸಲಿಡಲು ಅನೇಕ ಜನರು ಒತ್ತಡ ಹೇರುತ್ತಿದ್ದಾರೆ. ಈ ರೀತಿ ಮಾಫಿಯಾಗೆ ನಾನೆಂದು ತಲೆಬಾಗುವುದಿಲ್ಲ ಎಂದು ಮಮತಾ ಹೇಳಿದ್ದಾರೆ.
ನ್ಯೂಸ್ ಪೇಪರ್ ಗಳಿಗೆ ನಿರ್ಬಂಧ ಹೇರಿದಂತೆ, ನ್ಯೂಸ್ ಚಾನೆಲ್ ಗಳಿಗೂ ಮಮತಾ ಅಧಿಕೃತವಾಗಿ ನಿರ್ಬಂಧ ಹೇರುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.












Click it and Unblock the Notifications