Times ಗೌರವ: ಮಾ, ಭೂಮಿ, ಜನತೆಗೆ ಅರ್ಪಿಸಿದ ದೀದಿ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಾಗೂ ಬೃಹತ್ ಹೂಡಿಕೆದಾರ ವಾರೆನ್ ಬಫೆಟ್‌ರ ಸಾಲಿನಲ್ಲಿ ಮಮತಾ ಗುರುತಿಸಿಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅಲ್ಲದೆ ಇನ್ನೊಬ್ಬ ಭಾರತೀಯ ಮಹಿಳೆ ಪಟ್ಟಿಲ್ಲಿ ಕಾಣಿಸಿಕೊಂಡಿದ್ದಾರೆ. ಸಲಿಂಗ ಕಾಮಿಗಳು ಹಾಗೂ ಲಿಂಗ ಪರಿವರ್ತಿತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ವಕೀಲೆ ಅಂಜಲಿ ಗೋಪಾಲನ್ ಹೆಸರು ಕೂಡಾ ಸೇರ್ಪಡೆಗೊಂಡಿದೆ.
ಅಮೆರಿಕದ ಬಾಸ್ಕೆಟ್‌ಬಾಲ್ ಮಾಂತ್ರಿಕ ಜೆರೆಮಿ ಲಿನ್‌ರ ಹೆಸರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಮಮತಾ ವಿವಾದ: ರಾಜ್ಯ ಸರ್ಕಾರದ ಅನುದಾನ, ಗ್ರಂಥಾಲಯಗಳಿಗೆ ವಾರ್ತಾಪತ್ರಿಕೆಗಳ ಆಯ್ಕೆ ಹಾಗೂ ಮುಖ್ಯಮಂತ್ರಿಯ ವ್ಯಂಗ್ಯಚಿತ್ರವನ್ನು ರಚಿಸಿ ಪ್ರಸಾರ ಪ್ರಾಧ್ಯಾಪಕರೊಬ್ಬರ ಬಂಧನಕ್ಕೆ ಸೇರಿದಂತೆ ಇತ್ತೀಚೆಗೆ ಮಮತಾ ಬ್ಯಾನರ್ಜಿ ಸಾಕಷ್ಟು ವಿವಾದಗಳಲ್ಲಿ ಕಾಣಿಸಿಕೊಂಡಿದ್ದು.
ಆದರೆ, 57ರ ಹರೆಯದ ಬ್ಯಾನರ್ಜಿಯವರು ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ರಾಜಕಾರಣಿ ಎಂದು ಟೈಮ್ಸ್ ಹೇಳಿದೆ.












Click it and Unblock the Notifications