Q3: ಎಚ್ ಡಿಎಫ್ ಸಿ ಬ್ಯಾಂಕ್ ಭರ್ಜರಿ ನಿವ್ವಳ ಲಾಭ

ಪ್ರತಿ ಷೇರಿಗೆ 4.30 ರುನಂತೆ ಲಾಭಾಂಶ ಘೋಷಿಸಿದೆ. ಉತ್ತಮ ಸೇವೆ ಒದಗಿಸುವಲ್ಲಿ ಅಗ್ರಗಣ್ಯ ಸಾಲಿನಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಗುರುತಿಸಿಕೊಂಡಿದೆ.
ಮಾ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ಎಣಿಕೆಯಂತೆ ಒಟ್ಟಾರೆ 32,530.0 ಕೋಟಿ ರು ನಿವ್ವಳ ಆದಾಯ ಗಳಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ 17,540.5 ಕೋಟಿ ಆದಾಯ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 14,878.3 ಕೋಟಿ ರು ಗಳಿಸಿತ್ತು.
ಒಟ್ಟಾರೆ ನಿವ್ವಳ ಲಾಭದಲ್ಲಿ ಶೇ 31.6ರಷ್ಟು ಜಿಗಿತಕಂಡಿದೆ. ಬಿಎಸ್ ಇನಲ್ಲಿ ಕಂಪನಿ ಷೇರುಗಳು ಏರುಮುಖದಲ್ಲಿ ಸಾಗಿದೆ.
ವಿಸ್ತರಣೆ: ಮಾ 31ಕ್ಕೆ ಅನ್ವಯವಾಗುವಂತ ತನ್ನ ವಿಸ್ತರಣಾ ಜಾಲವನ್ನು ಹಿಗ್ಗಿಸಿಕೊಂಡಿರುವ ಎಚ್ ಡಿಎಫ್ ಸಿ 2,544 ಬ್ರ್ಯಾಂಚ್, 8,913 ಎಟಿಎಂಗಳನ್ನು 996 ನಗರಗಳಲ್ಲಿ ಹೊಂದಿದೆ.












Click it and Unblock the Notifications