ಬಸವ ಜಯಂತಿಗೆ ಸಿಹಿ ಸುದ್ದಿ ಕೊಡುವೆ ಎಂದ ಬಿಎಸ್ ವೈ

ಬಿಜೆಪಿಯಲ್ಲಿ ಬೇಡಿಕೊಂಡು ತಿನ್ನುವುದಕ್ಕಿಂತ ಹೊಸ ಪಕ್ಷ ಕಟ್ಟಿ ರಾಜನಂತೆ ಮೆರೆಯುವುದು ಉತ್ತಮ ಎಂದು ಯಡಿಯೂರಪ್ಪ ಅವರ ಆಪ್ತರು ಸಲಹೆ ನೀಡಿದ್ದಾರೆ. ಆಪ್ತ ಜ್ಯೋತಿಷಿಗಳು ಕೂಡಾ ಏ.24 ರ ನಂತರ ದಿನ ಚೆನ್ನಾಗಿದೆ ಎಂದಿದ್ದಾರೆ.
ಪಕ್ಷವನ್ನು ನಾನೊಬ್ಬನೇ ಬಿಡಬೇಕಾ? ಎಲ್ಲರ ಒಟ್ಟಿಗೆ ಬಿಡಬೇಕಾ? ಸರ್ಕಾರ ಉಳಿಸಬೇಕಾ? ಬೀಳಿಸಬೇಕಾ? ಖೇಣಿ ಪಕ್ಷ ಸೇರಬೇಕಾ? ಶ್ರೀರಾಮುಲು ಹಿಂದೆ ನಿಲ್ಲಬೇಕಾ?
ಹೊಸ ಪಕ್ಷಕ್ಕೆ ಬಂಡವಾಳ ಯಾರು ಹೂಡುತ್ತಾರೆ? ಬಿಜೆಪಿ ರಾಷ್ಟ್ರಮಟ್ಟದಲ್ಲಿ ಸ್ಥಾನ ಕಲ್ಪಿಸಿದರೆ ಏನು ಮಾಡಬೇಕು? ಇವೇ ಮುಂತಾದ ಪ್ರಶ್ನೆಗಳನ್ನು ಇಟ್ಟುಕೊಂಡು ಯಡಿಯೂರಪ್ಪ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆ.
ಕೋರ್ಟ್ ನೀಡುವ ತೀರ್ಪಿನ ಮೇಲೆ ಹೈಕಮಾಂಡ್ ತನ್ನ ನಿರ್ಧಾರ ಪ್ರಕಟಿಸುವುದಾಗಿ ಸೂಚನೆ ನೀಡಿದೆ. ಯಾವುದಕ್ಕೂ ಇನ್ನೊಂದು ವಾರದಲ್ಲಿ ಸ್ಫೋಟಕ ಸುದ್ದಿ ಹೊರಬೀಳುವ ಮುನ್ಸೂಚನೆ ಬಂದಿದೆ.
FYI: * ಯಡಿಯೂರಪ್ಪ ಅವರಿಗೆ 73 ಶಾಸಕರು, 15 ಸಂಸದರು ಹಾಗೂ 3 ರಾಜ್ಯ ಸಭಾ ಸದಸ್ಯರ ಬೆಂಬಲ ಸಿಗುವ ಸಾಧ್ಯತೆಯಿದೆ.
* ಎನ್ ಸಿಪಿ, ಜೆಡಿಯು, ಕರ್ನಾಟಕ ಮಕ್ಕಳ ಪಕ್ಷ, ಬಿಎಸ್ ಆರ್ ಕಾಂಗ್ರೆಸ್ ಕಡೆಯಿಂದ ಯಡಿಯೂರಪ್ಪಗೆ ಆಫರ್ ಬಂದಿದ್ದು ಸುಳ್ಳಲ್ಲ.
* ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದರೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮರು ಸ್ಥಾಪನೆ. ಇಲ್ಲದಿದ್ದರೆ, ರಾಜ್ಯಾಧ್ಯಕ್ಷ ಪಟ್ಟ ಖಚಿತ.
* ಅದಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ತಡೆಗಟ್ಟಬೇಕು. ಇಲ್ಲದಿದ್ದರೆ ಸದಾನಂದ ಗೌಡರ ಸೀಟು ಭದ್ರವಾಗುತ್ತದೆ.
* ಕ್ಲೀನ್ ಚಿಟ್ ಸಿಗದಿದ್ದರೆ ಮತ್ತೆ ಪರಪ್ಪನ ಅಗ್ರಹಾರ ಜೈಲುವಾಸ ಸಾಧ್ಯತೆ.












Click it and Unblock the Notifications