ಬರಪೀಡಿತ ಪಾವಗಡದಲ್ಲಿ ಮೇವು ಹಂಚಿದ ಸ್ವಾಮೀಜಿ

ಬರಗಾಲ ಪರಿಹಾರ ಯೋಜನೆಯಡಿ ಈಗಾಗಲೇ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಮೇವನ್ನು ವಿತರಿಸಿದ್ದು, ಇದೀಗ ಯಾವ ಅಧಿಕಾರಿ ವರ್ಗದವರೂ ಭೇಟಿ ನೀಡದ ಅತ್ಯಂತ ಕುಗ್ರಾಮವಾದ ರಾಯಚೆರ್ಲುವಿನಲ್ಲಿ ಒಂದು ಲಾರಿಯಷ್ಟು ಮೇವನ್ನು ಶ್ರೀ ಸ್ವಾಮಿ ಜಪಾನಂದಜಿ ಅವರು ವಿತರಿಸಿದರು.
ಶ್ರೀ ಸ್ವಾಮಿ ಜಪಾನಂದಜಿ ಅವರು ಮಾತನಾಡಿ, ಮಳೆ ಮತ್ತು ಬೆಳೆ ಇಲ್ಲದೆ ಜನತೆ ಗುಳೆ ಹೋಗುವ ಪರಿಸ್ಥಿತಿಯಿದ್ದು, ರೈತರಿಗೆ ಸ್ಥೈರ್ಯ ತುಂಬುವ ಕೆಲಸವನ್ನು ವಿವೇಕಾನಂದ ಆರೋಗ್ಯ ಕೇಂದ್ರವು ಮಾಡುತ್ತಿದೆ. ಸರ್ಕಾರವು ಪಾವಗಡ ತಾಲ್ಲೂಕನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಬರ ಪರಿಸ್ಥಿತಿ ಅರಿಯಲು ಮಧುಗಿರಿಯವರೆಗೂ ಬಂದಿದ್ದ ಮಂತ್ರಿಗಳ ತಂಡ ಗಡಿ ಗ್ರಾಮವಾದ ಪಾವಗಡಕ್ಕೂ ಭೇಟಿ ನೀಡಬೇಕಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಾವಗಡ ತಾಲ್ಲೂಕಿನ ಹಿರಿಯ ಮುಖಂಡರಾದ ಪಿ.ಎಚ್. ಸುಬ್ಬರಾಯಪ್ಪ ಅವರು ಮಾತನಾಡಿ, ಬರಗಾಲದಿಂದ ಪರಿತಪಿಸುತ್ತಿರುವ ಪಾವಗಡದ ಜನತೆಗೆ ಸ್ಪಂದಿಸುತ್ತಿರುವ ಶ್ರೀ ಜಪಾನಂದಜಿ ಅವರ ಕಾರ್ಯಯೋಜನೆಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.











Click it and Unblock the Notifications