ಬಿಬಿಎಂಪಿ ಕಾರ್ಪೊರೇಟರ್ ಶಿವಕುಮಾರ್ ನಾಪತ್ತೆ

ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಶಿವಕುಮಾರ್ ರನ್ನು ಬಂಧಿಸಲು ಅವರ ಮನೆಗೆ ಹೋದಾಗ ಬಿಬಿಎಂಪಿ ಸದಸ್ಯ ಶಿವ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಶಿವಕುಮಾರ್ ಹಾಗೂ ಅವರ ಅಣ್ಣನ ಮೇಲೆ ಅತಿಕ್ರಮ ಪ್ರವೇಶ, ಬೆದರಿಕೆ, ಕಟ್ಟಡ ನಿವೇಶನ ಹಾಳುಗೆಡವಿ 7 ಲಕ್ಷ ರು ನಷ್ಟ ಉಂಟು ಮಾಡಿದ ಆರೋಪವನ್ನು ಹೊರೆಸಿ ಆದಿತ್ಯ ರಹೇಜಾ ಎಂಬವವರು ಪೊಲೀಸರಿಗೆ ದೂರು ನೀಡಿದ್ದರು.
ಮಾ.29ರಂದು ಕಾರ್ಪೊರೇಟರ್ ಶಿವಕುಮಾರ್ ಹಾಗೂ ಆತನ ಕಡೆಯವರು ಜಿಸ್ಟಾಡ್ ಹೋಟೆಲ್ ಪ್ರೈ ಲಿ ವಿಠಲ್ ಮಲ್ಯ ರಸ್ತೆಯಲ್ಲಿ ನಿರ್ಮಿಸುತ್ತಿರುವ ಫೈವ್ ಸ್ಟಾರ್ ಹೋಟೆಲ್ ಗೆ ಆಗಮಿಸಿ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಆದರೆ, ಇದಕ್ಕೆ ಒಪ್ಪದಿದ್ದಾಗ ಅಲ್ಲಿದ್ದ ನಿರ್ಮಾಣ ಸಾಮಾಗ್ರಿಗಳನ್ನು ಒತ್ತೊಯ್ದಿದ್ದಾರೆ. 88 ಸೆಂಟ್ರಿಂಗ್ ಶೀಟು, 37 ಬೀಮ್ ರಿಂಗ್ ಗಳನ್ನು ತೆಗೆದುಕೊಂಡು ಹೋಗಿದ್ದಲ್ಲದೆ 7 ಲಕ್ಷ ರು ಮೌಲ್ಯದ ಸಾಮಾಗ್ರಿಗಳನ್ನು ಹಾಳುಗೆಡವಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications