ಲವ್ ಜಿಹಾದ್: ಪ್ರೀತಿಗಾಗಿ ಹೆತ್ತವರನ್ನೇ ಕೊಂದ ಹುಡುಗಿ

ಮೌಸಮಿ ಸರ್ಕಾರ್ ಅಪ್ಪ ಅಮ್ಮನ ಮುದ್ದಿನ ಮಗಳಾಗಿದ್ದಳು. ಒಬ್ಬಳೇ ಮಗಳು ಆದರೆ, ಯಾವಾಗ ಎಸ್ ಕೆ ಮೊಯ್ದುಲ್ ಅಲಂ ಅಲಿಯಾಸ್ ರಿಪ್ಪನ್ ಪ್ರೇಮಪಾಶಕ್ಕೆ ಬಿದ್ದಳೋ ಎಲ್ಲವೂ ಬದಲಾಗಿಬಿಟ್ಟಿತು.
ನಿವೃತ್ತ ಭೂಸೇನೆ ಅಧಿಕಾರಿಯಾಗಿದ್ದ ಮೌಸಮಿ ಅಪ್ಪ ಮೋಹಿತ್ ರನ್ನು ಕೊಲ್ಲಲು ರಿಪ್ಪನ್ ನಾಲ್ವರು ಬಾಡಿಗೆ ಹಂತಕರನ್ನು ಬಳಸುತ್ತಾನೆ. ಇದಕ್ಕೆ ಮೌಸಮಿ ಸಂಪೂರ್ಣ ಸಹಕಾರ ನೀಡುತ್ತಾಳೆ.
ಈ ಡಬ್ಬಲ್ ಮರ್ಡರ್ ಮಾಡಲು ಹಂತಕರು ತಲಾ 30 ಸಾವಿರ ರು ಪಡೆದಿರುತ್ತಾರೆ. ಅಪ್ಪ ಅಮ್ಮನ ಕೊಲೆ ನಡೆಯುವಾಗ ಮೌಸಮಿ ಎಂಬ ನಿರ್ದಯಿ ಮನೆಯ ಉಪ್ಪರಿಗೆ ಮೇಲೆ ಕೂತು ತನ್ನ ಪ್ರೇಮಿ ರಿಪ್ಪನ್ ಕನಸು ಕಾಣುತ್ತಿರುತ್ತಾಳೆ.
ನಂತರ ಪೊಲೀಸರು ಮನೆಗೆ ಬಂದಾಗ ಯಾರೋ ಆಗುಂತಕರು ಬಂದು ಕೊಲೆ ಮಾಡಿದ್ದಾರೆ. ನನಗೇನೂ ಗೊತ್ತಿಲ್ಲ ಎಂದು ಮೌಸಮಿ ಹೇಳಿದ್ದಾಳೆ.
ಇದು ಲವ್ ಜಿಹಾದ್ ಪ್ರಕರಣ ಎಂಬುದು ಸ್ಪಷ್ಟವಾಗಿಲ್ಲ. ಇಬ್ಬರಲ್ಲೂ ಪ್ರೀತಿ ಇತ್ತು ಎಂಬುದು ತನಿಖೆ ನಂತರ ಪೊಲೀಸರಿಗೆ ತಿಳಿದು ಬಂದಿದೆ. ರಿಪ್ಪನ್ ಹಾಗೂ ರಾಜೇಶ್ ವರ್ಮ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮೌಸಮಿ ತನ್ನ ತಪ್ಪೊಪ್ಪಿಗೆ ನೀಡಿದ್ದಾಳೆ. ಆದರೆ, ಅಪ್ಪ, ಅಮ್ಮನನ್ನು ಕಳೆದುಕೊಂಡಿದ್ದಾಳೆ.












Click it and Unblock the Notifications