ಏ.7ರಿಂದ ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭ

ಒಟ್ಟು 15,732 ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುತ್ತಿದ್ದಾರೆ. ಇವರಲ್ಲಿ ಉಪ ಮುಖ್ಯ ಮೌಲ್ಯಮಾಪಕರ ಸಂಖ್ಯೆ 2497 ಮತ್ತು ಸಹಾಯಕ ಮೌಲ್ಯಮಾಪಕರ ಸಂಖ್ಯೆ 13235. ಗಣಿತ, ಹಿಂದಿ ಮತ್ತು ಸಂಸ್ಕೃತ ವಿಷಯಗಳಿಗೆ ಹೊರತುಪಡಿಸಿ ಉಳಿದ ವಿಷಯಗಳಿಗೆ ಉಪ ಮುಖ್ಯ ಮೌಲ್ಯಮಾಪಕರು ಏಪ್ರಿಲ್ 7ರಂದು ಮತ್ತು ಸಹಾಯಕ ಮೌಲ್ಯಮಾಪಕರು ಏಪ್ರಿಲ್ 9ರಂದು ಹಾಜರಾಗಲಿದ್ದಾರೆ.
ಗಣಿತ, ಹಿಂದಿ ಮತ್ತು ಸಂಸ್ಕೃತ ವಿಷಯಗಳಿಗೆ ಉಪ ಮುಖ್ಯ ಮೌಲ್ಯಮಾಪಕರು ಏಪ್ರಿಲ್ 9ರಂದು ಮತ್ತು ಸಹಾಯಕ ಮೌಲ್ಯಮಾಪಕರು ಏಪ್ರಿಲ್ 11ರಂದು ಕರ್ತವ್ಯಕ್ಕೆ ಹಾಜರಾಗಲು ತಿಳಿಸಿದೆ. ಮೌಲ್ಯಮಾಪನ ಕಾರ್ಯಕ್ಕೆ ಆದೇಶ ಕಳುಹಿಸಿರುವ ಎಲ್ಲಾ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳು ಹೊರಬೀಳುವ ಸಂಭವನೀಯತೆಯಿದೆ.












Click it and Unblock the Notifications