ಸಿಎಂ ಸದಾನಂದ ಗೌಡ ಸಿಟಿ ರೌಂಡ್ಸ್ ಮುಖ್ಯಾಂಶಗಳು

DV Sadananda Gowda City Rounds
ಬೆಂಗಳೂರು, ಎ.3: ಬಡಜನರು ನೆಮ್ಮದಿಯಾಗಿ ಬದುಕುವಂತೆ ಮಾಡಲು ಹಾಗೂ ನಾಗರಿಕರ ಜೀವನ ಮಟ್ಟ ಸುಧಾರಿಸಲು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸುಮಾರು 30 ಸಾವಿರ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಅವರು ತಮ್ಮ 'ಸಿಟಿ ರೌಂಡ್ಸ್' ಸಮಯದಲ್ಲಿ ಘೋಷಿಸಿದ್ದಾರೆ.

ಸಿಎಂ ಸದಾನಂದ ಗೌಡರ ಸಿಟಿ ರೌಂಡ್ಸ್ ಹೈಲೇಟ್ಸ್ ಇಲ್ಲಿದೆ:
* ಬಿಡಿಎ ವತಿಯಿಂದ 6 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
* ನಗರದ 15 ವಿವಿಧ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ.
* ಸುಮಾರು 5.5 ಲಕ್ಷ ರೂ. ವೆಚ್ಚದಲ್ಲಿ ನೆಲ ಮಹಡಿ ಸೇರಿದಂತೆ 4 ಅಂತಸ್ತುಗಳ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ರಸ್ತೆ ಕಾಮಗಾರಿ, ಮೇಲ್ಸೇತುವೆ, ಮಾರುಕಟ್ಟೆ:
*750 ಕೋಟಿ ರೂ. ವೆಚ್ಚದಲ್ಲಿ ಬಿಡಿಎ ವತಿಯಿಂದ ಮೇಲ್ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
* 110 ಕೋಟಿ ರೂ. ವೆಚ್ಚದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರ ಮುಂದಾಗಿದೆ
* ನಂದಿನಿ ಲೇಔಟ್ ಬಡಾವಣೆಯಲ್ಲಿ ಈಜುಕೊಳ ನಿರ್ಮಾಣ ಕೆಲಸಕ್ಕೆ ಒಪ್ಪಿಗೆ ನೀಡಲಾಗಿದೆ.

* ಸುಮಾರು 630 ಕೋಟಿ ರೂ. ವೆಚ್ಚದಲ್ಲಿ ಜಯನಗರ, ಕೆಆರ್ ಪುರಂ, ಮಲ್ಲೇಶ್ವರಂ ಹಾಗೂ ಶೇಷಾದ್ರಿಪುರಂಗಳಲ್ಲಿ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.
* ಮಹತ್ವದ ಮೆಟ್ರೊ ರೈಲು ಯೋಜನೆಗೆ ಈವರೆಗೆ 3,500 ಕೋಟಿ ರೂ.ಗಳಿಗೂ ಅಧಿಕ ಹಣ ಬಿಡುಗಡೆ ಮಾಡಲಾಗಿದೆ.

ನೀರಿನ ಸಮಸ್ಯೆ: ಕಾವೇರಿ ಕುಡಿಯುವ ನೀರಿನ ನಾಲ್ಕನೆ ಹಂತದ ಯೋಜನೆಯು ಜುಲೈ ವೇಳೆಗೆ ಮುಗಿಯಲಿದೆ. ಇದು ಪೂರ್ಣಗೊಂಡ ಮೇಲೆ ಬೆಂಗಳೂರಿನ ನೀರಿನ ಬವಣೆ ತಪ್ಪಲಿದೆ.

* ದೇಶದಲ್ಲೆ 2ನೆ ಅತಿದೊಡ್ಡ ಶಿಲ್ಪೋದ್ಯಾನವನ್ನು ಬನಶಂಕರಿ 6ನೆ ಹಂತದಲ್ಲಿ ನಿರ್ಮಿಸಲಾಗುತ್ತಿದೆ.
* ಬನಶಂಕರಿಯಲ್ಲಿ ಸುಮಾರು ನೂರು ಎಕರೆ ಪ್ರದೇಶದಲ್ಲಿ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ.

ಮುಂದಿನ ದಿನಗಳಲ್ಲಿ ರಸ್ತೆಗಳ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಸರಬರಾಜು ಹಾಗೂ ಬೆಂಗಳೂರು ನಗರಕ್ಕೆ ಇನ್ನಿತರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುವುದು ಎಂದು ಸದಾನಂದ ಗೌಡ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+