ರಾಜ್ಯಪಾಲ ಭಾರದ್ವಾಜ್ ಗೆ ಸುತ್ತಲು ಆಡಿ Q7 ಬೇಕಂತೆ

ಕರ್ನಾಟಕದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರು ಕೇರಳದ ಉಸ್ತುವಾರಿ ರಾಜ್ಯಪಾಲರಾಗಿದ್ದಾರೆ. ಅವರಿಗೆ ಓಡಾಡಲು ಐಷಾರಾಮಿ 'ಆಡಿ ಕ್ಯು 7' ಕಾರು ಬೇಕಂತೆ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿರುವ ಕೇರಳ ಸರ್ಕಾರ, ರಾಜ್ಯಪಾಲರ ಬೇಡಿಕೆ ಕಂಡು ಬೆರಗಾಗಿದೆ.
ರಾಜಭವನದಲ್ಲಿ ಮರ್ಸಿಡಿಸ್ ಬೆಂಜ್ ಸೇರಿದಂತೆ 8 ಕಾರುಗಳಿದೆ. ಆದರೆ ಕರ್ನಾಟಕದಲ್ಲಿ ರಾಜ್ಯಭಾರದ ಕೆಲಸದಲ್ಲಿ ಬಿಡುವು ಮಾಡಿಕೊಂಡು ಆಗೊಮ್ಮೆ ಈಗೊಮ್ಮೆ ಕೇರಳಕ್ಕೆ ಬರುವ ಭಾರದ್ವಾಜರಿಗೆ ಈ 8 ಕಾರುಗಳ ಪೈಕಿ ಯಾವುದೂ ಹಿಡಿಸುತ್ತಿಲ್ಲವಂತೆ.
ಸುಮಾರು 60-70 ಲಕ್ಷ ರು ಮೌಲ್ಯದ 'ಆಡಿ ಕ್ಯು 7' ಕಾರು ಒದಗಿಸಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಸಿಗುವುದೊಂದೇ ಬಾಕಿ ಉಳಿದಿದೆ.
ಆದರೆ ರಾಜ್ಯಪಾಲರ ಈ ಬೇಡಿಕೆ ಕೆಲ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಭಾರದ್ವಾಜ್ ಅವರ ಮೇಲೆ ಆರೋಪ ಹೊರೆಸಲಾಗಿದೆ.












Click it and Unblock the Notifications