ಎಆರ್ ಇನ್ಫಾಂಟ್ ರಾಜ್ಯದ ನೂತನ ಡಿಜಿ ಐಜಿಪಿ

AR Infant DG IGP
ಬೆಂಗಳೂರು, ಮಾ.31: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ 1977ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಎಆರ್ ಇನ್ಫಾಂಟ್ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರ ಶನಿವಾರ(ಮಾ.31) ಆದೇಶ ಹೊರಡಿಸಿದೆ. ಎ ಆರ್ ಇನ್ಫಾಂಟ್ ಅವರು ಸಂಜೆ 5.30ರ ಸುಮಾರಿಗೆ ನೂತನ ಡಿಜಿ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಶಂಕರಿ ಬಿದರಿ ಅವರನ್ನ ಕರ್ನಾಟಕ ಹೌಸಿಂಗ್ ಬೋರ್ಡ್ ಎಂಡಿಯಾಗಿ ವರ್ಗಾವಣೆ ಮಾಡಲಾಗಿದೆ.

ಈ ಮಧ್ಯೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಶಂಕರ್ ಎಂ. ಬಿದರಿ ಹಾಗೂ ಗೃಹರಕ್ಷಕ ದಳದ ಡಿಜಿಪಿಯಾಗಿದ್ದ ಇನ್ಫಾಂಟ್ ಅವರ ಮಧ್ಯೆ ಕಾನೂನು ಸಮರ ಜಾರಿಯಲ್ಲಿದೆ.

ಶಂಕರ್ ಬಿದರಿ ನೇಮಕಾತಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ ರದ್ದುಪಡಿಸಿದೆ. ಬಿದರಿಯವರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇರುವುದರಿಂದ, ಸೇವಾಹಿರಿತನದಲ್ಲಿ ಅವರಿಗಿಂತ ಹಿರಿಯರಾಗಿರುವ ಎಆರ್ ಇನ್ಫಾಂಟ್ ಅವರು ಕರ್ನಾಟಕ ಹೈಕೋರ್ಟಿನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.

ಶಂಕರ್ ಬಿದರಿ ಅವರ ಅಧಿಕಾರ ಅವಧಿ 2012ರ ಮೇ ತಿಂಗಳಿನವರೆಗೂ ಇತ್ತು. ಆದರೆ, ಅದಕ್ಕೆ ಮುನ್ನ, ನೇಮಕಾತಿ ರದ್ದುಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+