ಯಡಿಯೂರಪ್ಪ ಸನ್ಮಾನಕ್ಕೆ ಹೋಗ್ಬೇಡಿ, ಆರೆಸ್ಸೆಸ್ ಕಟ್ಟಪ್ಪಣೆ

BS Yeddyurappa
ಶಿವಮೊಗ್ಗ, ಮಾ.31: ಇಲ್ಲಿನ ಎನ್ ಇಎಸ್ ಮೈದಾನದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿಮಾನಿ ಬಳಗ ಆಯೋಜಿಸಿರುವ ಸನ್ಮಾನ ಸಮಾರಂಭಕ್ಕೆ ಹೋಗಕೂಡದು ಎಂದು ಸಿಎಂ ಸದಾನಂದ ಗೌಡ ಸೇರಿದಂತೆ ಪ್ರಮುಖ ಸಚಿವರುಗಳಿಗೆ ಆರೆಸ್ಸೆಸ್ ಕಟ್ಟಪ್ಪಣೆ ಮಾಡಿದೆ ಎಂದು ತಿಳಿದು ಬಂದಿದೆ.

ಆದರೆ, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಮಾತ್ರ ತಮ್ಮ ಊರು ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ತಪ್ಪಿಸಿಕೊಳ್ಳಲು ಬೇರೆ ಕಾರಣವೂ ಸಿಗದಿರುವುದರಿಂದ ಅನಿವಾರ್ಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.

ನಾರಿ ಶಕ್ತಿ ಸಮಾವೇಶದಲ್ಲಿ ಸಿಎಂ ಸದಾನಂದ ಗೌಡರಿಗೆ ಸಾಥ್ ನೀಡಿರುವ ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ಹೋಗಲು ಯಾವುದೇ ಅಡ್ಡಿಯಿಲ್ಲ. ಶಿವಮೊಗ್ಗ ಅಭಿವೃದ್ಧಿಗೆ ಯಡಿಯೂರಪ್ಪ ಅವರು ನೀಡಿದ ಕೊಡುಗೆ ಸ್ಮರಿಸಲು ಅಭಿಮಾನಿಗಳು ಸಮಾವೇಶ ನಡೆಸುತ್ತಿದ್ದಾರೆ ಇದರಲ್ಲಿ ತಪ್ಪೇನಿಲ್ಲ. ಚಹಾಕೂಟ, ಭೋಜನಕೂಟದಂತೆ ನಾರಿ ಶಕ್ತಿ ಸಮಾವೇಶ, ಬಿಎಸ್ ವೈ ಸಮಾವೇಶ ಎಲ್ಲವೂ ಬಿಜೆಪಿ ಸಮಾರಂಭಗಳೇ ಎಂದಿದ್ದಾರೆ.

ಆದರೆ, ಬಿಜೆಪಿಗೂ ಈ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಬೆಂಬಲವೂ ಇಲ್ಲ. ಯಡಿಯೂರಪ್ಪ ಅಭಿಮಾನಿಗಳಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ಕಮ್ಮಿ. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದವರೇ ಈಗ ಯಡಿಯೂರಪ್ಪ ಬೆನ್ನ ಹಿಂದೆ ನಿಂತಿರುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೃಹತ್ ಸಮಾರಂಭ: 2 ಲಕ್ಷ ಜನ ಸೇರಿಸುವ ಹುಮ್ಮಸ್ಸಿನಲ್ಲಿರುವ ಬಿಎಸ್ ವೈ ಅಭಿಮಾನಿಗಳು 35 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಿದ್ದಾರೆ. 100 ಜನ ಕುಳಿತುಕೊಳ್ಳಬಹುದಾದ ಮುಖ್ಯ ವೇದಿಕೆ. ಎಲ್ಲೆಡೆ ಎಲ್ ಸಿಡಿ ಸ್ಕ್ರೀನ್ ಅಳವಡಿಸಲಾಗಿದೆ.

ರಿಚರ್ಡ್ ಲೂಯಿಸ್ ಮತ್ತು ಮೈಸೂರು ಆನಂದ್ ಇವರಿಂದ ಹಾಸ್ಯ ಸಂಜೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಡಿಯೂರಪ್ಪ ಅವರನ್ನು ರಂಜಿಸಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕ ಅಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+