ಯಡಿಯೂರಪ್ಪ ಬೆಂಬಲಕ್ಕೆ ನಿಂತ ಪುತ್ರರತ್ನ ವಿಜಯೇಂದ್ರ

ಗಣಿ ಉದ್ಯಮಿ ಪ್ರವೀಣಚಂದ್ರ ಅವರು ಚಿತ್ರದುರ್ಗ ಆಸುಪಾಸಿನಲ್ಲಿ ಗಣಿಗಾರಿಕೆ ಗುತ್ತಿಗೆಗಾಗಿ ಅರ್ಜಿ ಗುಜರಾಯಿಸಿದ್ದು 2004ರಲ್ಲಿ. 2 ವರ್ಷದ ಬಳಿಕ ಕೇಂದ್ರ ಸರ್ಕಾರ 2006ರ ಫೆ. 28ರಂದು ಗಣಿಗಾರಿಕೆಗೆ ಪರವಾನಗಿ ನೀಡಿದೆ. ಆ ಪರವಾನಗಿಗೆ ಅನುಮತಿ ನೀಡಬೇಕು ಎಂದು ಮೊದಲು ಸಲಹೆ ನೀಡಿದ್ದು ಅಂದಿನ (2006ರಲ್ಲಿ) ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
ಮುಂದೆ... 2010ರ ಅ. 12ರಂದು ಕೇಂದ್ರ ಸರ್ಕಾರದಿಂದ ಮಂಜೂರಾತಿಯಾದ ಪರವಾನಗಿಗೆ ರಾಜ್ಯ ಸರ್ಕಾರ (ಮುಖ್ಯಮಂತ್ರಿ ಯಡಿಯೂರಪ್ಪ) ಅಂತಿಮ ಅಧಿಸೂಚನೆ ಹೊರಡಿಸಿತು. ಸೋ, ಪ್ರವೀಶಚಂದ್ರಗೆ ಪರವಾನಗಿ ನೀಡಿದ್ದು ಕೇಂದ್ರ ಮತ್ತು ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ. CEC ಸಹ ತನ್ನ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಇಳಿಸಿದೆ. ಇದರಲ್ಲಿ ಮುಖ್ಯಮಂತ್ರಿಯಾಗಿ ನಮ್ಮಪ್ಪನ ಪಾತ್ರವೇನೂ ಇಲ್ಲ ಎಂಬುದು ವಿಜಯೇಂದ್ರರ ವಾದ ಸರಣಿ.
ಅವರು ಈ ವಾದ ಸರಣಿಗೆ ಇನ್ನೂ ಒಂದು ಬಲಿಷ್ಠ ಕೊಂಡಿಯನ್ನು ಪೋಣಿಸುತ್ತಾರೆ: ಅರ್ಜಿದಾರ ಎಸ್ ಆರ್ ಹಿರೇಮಠ ಅವರು ಲಂಚದ ಎಂದು ಯಾವ ಮೊತ್ತವನ್ನು ಹೇಳುತ್ತಿದ್ದಾರೋ ಅದನ್ನು ಶಿವಮೊಗ್ಗದವರೇ ಆದ ಪ್ರವೀಣಚಂದ್ರರಿಂದ ಕೈಗಡ ಸಾಲವಾಗಿ ಪಡೆಯಲಾಗಿದೆ.
ಆರು ಕೋಟಿ ರೂ.ಗಳನ್ನು ಪ್ರವೀಣಚಂದ್ರ ಅವರ ಕಂಪನಿಯಿಂದ 2009ರ ಜನವರಿಯಲ್ಲಿ ಸಾಲವಾಗಿ ಪಡೆಯಲಾಗಿತ್ತು. ಆ ಪ್ರಕಾರ 2009ರ ನವೆಂಬರ್‌ನಲ್ಲಿ 1 ಕೋಟಿ ರೂಪಾಯಿ ಮತ್ತು 2011ರ ಏಪ್ರಿಲ್‌ನಲ್ಲಿ 1.50 ಕೋಟಿ ರೂಪಾಯಿಗಳನ್ನು ಚೆಕ್ ಮೂಲಕವೇ ವಾಪಸ್ ನೀಡಲಾಗಿದೆ. ಇನ್ನೂ ಸಾಲ ತೀರಿಸಬೇಕಾಗಿದೆ. ಇದೊಂದು ಖಾಸಗಿ ಸಾಲ ಪ್ರಕ್ರಿಯೆ. ಅದಕ್ಯಾಕೆ ಇಷ್ಟೊಂದು ರಗಳೆ ಮಾಡಬೇಕು ಎಂಬುದು ವಿಜಯೇಂದ್ರರ ಅಮಾಯಕ ಪ್ರಶ್ನೆ.












Click it and Unblock the Notifications