ಯಡಿಯೂರಪ್ಪ ಸೇಫ್ ಸೇಫ್: CEC ವರದಿ

illegal-mining-kickback-bsy-safe-cec-report
ಬೆಂಗಳೂರು, ಮಾ.30: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರೋಧಿಗಳು ರೇಸ್ ಕೋರ್ಟ್ ರಸ್ತೆಯಲ್ಲಿರುವ ಯಡಿಯೂರಪ್ಪ ಅವರ ನಿವಾಸದ ಗೋಡೆಯೇರಿ 'ನೋಡ್ತಿರಿ ಸಂಜೆ ವೇಳೆಗೆ ಯಡ್ಡಿ ಮೇಲೆ ಸಿಬಿಐ ಕೇಸ್ ಬೀಳುತ್ತೆ' ಅಂತ ಪ್ರಲಾಪಿಸುತ್ತಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಯಾವುದೇ ಆತಂಕವಿಲ್ಲದೆ, ನಿರುಮ್ಮಳವಾಗಿ ಬಿಜೆಪಿ ಶಾಸಕ, ಸಚಿವರಿಗೆ ಬೆಳಗಿನ ಉಪಹಾರ ಉಣಬಡಿಸುತ್ತಿದ್ದಾರೆ.

ರೇಸ್ ಕೋರ್ಟ್ ರಸ್ತೆಯಲ್ಲಿ ಇಂತಹ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಅಂದರೆ 'ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ ಫಲವಾಗಿ ಯಡ್ಡಿ ಪುತ್ರರ ಕಂಪನಿಗೆ 6 ಕೋಟಿ ಕಿಕ್‌ಬ್ಯಾಕ್‌ ಸಂದಾಯವಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕಾ, ಬೇಡವಾ' ಎಂಬುದರ ಬಗ್ಗೆ CEC ಸಲ್ಲಿಸಿರುವ ಶಿಫಾರಸಿನ ಬಗ್ಗೆ ಸುಪ್ರೀಂಕೋರ್ಟ್‌ ಇಂದು ನಿರ್ಧಾರ ತೆಗೆದುಕೊಳ್ಳಲಿದೆ.

ಆದರೆ ತಕ್ಷಣಕ್ಕೆ ಯಡಿಯೂರಪ್ಪನವರಿಗೆ ನಿರಾಳವಾಗುವ ಸಂಗತಿಯೆಂದರೆ ಸುಪ್ರೀಂಕೋರ್ಟ್‌ ತನ್ನ ತೀರ್ಪನ್ನು ಇಂದು ನೀಡುವ ಸಾಧ್ಯತೆಯಿಲ್ಲ. ಬದಲಿಗೆ ಮುಂದಿನ ಶುಕ್ರವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಎರಡನೆಯದಾಗಿ: ಆರೋಪಿ ಯಡಿಯೂರಪ್ಪನವರನ್ನು ನಂಬುವುದಾದರೆ 'ಗಣಿಗಾರಿಕೆ ಗುತ್ತಿಗೆ ಪರವಾನಿಗೆಗೆ ಸಂಬಂಧಿಸಿದಂತೆ ಅವರ ಕುಟುಂಬದ ಸದಸ್ಯರಿಗೆ ಆರು ಕೋಟಿ ರುಪಾಯಿ ಕಿಕ್‌ಬ್ಯಾಕ್‌ ನೀಡಲಾಗಿದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. 'ಇದು ಸತ್ಯಕ್ಕೆ ದೂರವಾದುದು. ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಯಾವುದೇ ಗಣಿಗಾರಿಕೆ ಗುತ್ತಿಗೆಗೆ ಶಿಫಾರಸು ಮಾಡಿಲ್ಲ. ಹೀಗಾಗಿ ಕಿಕ್‌ಬ್ಯಾಕ್‌ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಸಾರಾಸಗಟಾಗಿ ಆರೋಪವನ್ನು ತಳ್ಳಿಹಾಕುತ್ತಾರೆ.

ಅಷ್ಟಕ್ಕೂ, ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಿದ್ದರೆ ಚೆಕ್‌ ವ್ಯವಹಾರವನ್ನು ವಿಚಾರಣೆ ಮಾಡಬಹುದು ಎನ್ನುವುದನ್ನು ಮಾತ್ರ ಸಿಇಸಿ ತನ್ನ ವರದಿಯಲ್ಲಿ ಹೇಳಿದೆ ಎಂದು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಒಕ್ಕೊರಲಿಂದ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+