ಭದ್ರಾವತಿ: ಪತ್ನಿ ಕಿರುಕುಳ ಪತಿ ಆತ್ಮಹತ್ಯೆ

ಭದ್ರಾವತಿ ನಗರದ ವೇಲೂರ್ ಶೆಡ್ ನಿವಾಸಿ ಪ್ರದೀಪ್ (30) ಬೆಂಗಳೂರಿನ ರೀಬಾಕ್ ಶೋರೂಮ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಇಂಟರ್‌ನೆಟ್ ಚಾಟಿಂಗ್ ಮೂಲಕ ಕೇರಳದ ಎರ್ನಾಕುಲಂನ ನಿಶಾ (29) ಎಂಬ ಯುವತಿ ಆತನಿಗೆ ಪರಿಚಯವಾಗಿದ್ದಳು.
ಸ್ಪಲ್ಪ ದಿನಗಳ ನಂತರ ಇವರಿಬ್ಬರ ನಡುವೆ ಪ್ರೀತಿ ಹೆಚ್ಚಾಗತೊಡಗಿತು. ಯುವತಿ ಒತ್ತಾಯದಿಂದ ಪ್ರದೀಪ ಕೇರಳಕ್ಕೆ ವರ್ಗಾವಣೆ ಮಾಡಿಸಿಕೊಂಡ. ಅಲ್ಲಿ ಇವರಿಬ್ಬರೂ ರಿಜಿಸ್ಟರ್ ಮದುವೆಯಾಗಿದ್ದರು.
ಬಣ್ಣ ಬದಲಾಯಿಸಿದ ಚಿಟ್ಟೆ: ಇಷ್ಟೆಲ್ಲಾ ಬೆಳವಣಿಗೆ ನಡೆದ ನಂತರ ಪ್ರದೀಪನಿಗೆ ತನ್ನ ಪ್ರೇಯಸಿಯ ನಿಜ ಬಣ್ಣ ಗೋಚರಿಸಿದೆ. ಆಕೆ ಈ ಮೊದಲೇ ಬೇರೊಬ್ಬನನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದಳು.
ಒಂದು ದಿನ ಆಕೆ ಇನ್ನೋರ್ವನ ಜೊತೆಯಿದ್ದಾಗ ನೋಡಿದ ಪ್ರದೀಪನನ್ನು ಪ್ರಶ್ನಿಸಿದ್ದಾನೆ. ನಂತರ ಆಕೆ ಪ್ರದೀಪನ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾಳೆ. ಜಾಮೀನಿನ ಮೇಲೆ ಹೊರಬಂದ ಪ್ರದೀಪನ ಮೇಲೆ ಮತ್ತೆ ಪ್ರಕರಣ ದಾಖಲಿಸಿದ್ದಾಳೆ. ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆ ಇನ್ನೂ ನಡೆಯಬೇಕಿದೆ.
ಈ ಘಟನಾವಳಿಗಳಿಂದ ಬೇಸತ್ತ ಪ್ರದೀಪ್ ತನ್ನ ಊರಿಗೆ ವಾಪಾಸ್ ಆಗಿದ್ದಾನೆ. ಆತ್ಮಹತ್ಯೆ ಯತ್ನದಲ್ಲಿ ಯತ್ನಿಸಿದ್ದಾನೆ. ಶಿವಮೊಗ್ಗ ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.












Click it and Unblock the Notifications