ಹಿರಿಯ ವೇದಿಕೆಯಿಂದ ದೂರವೇ ಉಳಿದ ಶಕುಂತಳಾ
ಪುತ್ತೂರು,
ಮಾ. 29: ಬಿಜೆಪಿ ಹಿರಿಯರ ವೇದಿಕೆಯ ಮುಂದಾಳು ಕೆ. ರಾಮ ಭಟ್ ಸ್ವಾಭಿಮಾನಿ ವೇದಿಕೆಯ ಗೌರವಾಧ್ಯಕ್ಷರಾಗಿದ್ದರೂ ಪ್ರಸಕ್ತ ರಾಜಕೀಯ ವಿದ್ಯಮಾನದ ಕುರಿತಂತೆ ಸ್ವಾಭಿಮಾನಿ ವೇದಿಕೆ ಈಗಲೂ ಸ್ವತಂತ್ರ ನಿಲುವನ್ನು ಹೊಂದಿದೆ ಎಂದು ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಸ್ವಾಭಿಮಾನಿ ವೇದಿಕೆ ತಾನು ಅಂದು ಹೊಂದಿದ್ದ ನಿರ್ಧಾರವನ್ನೇ ಇಂದಿಗೂ ಹೊಂದಿದೆ. ಬಿಜೆಪಿಯ ವಿದ್ಯಮಾನಗಳಿಗೂ ವೇದಿಕೆಗೂ ಯಾವುದೇ ಸಂಬಂಧ ಇಲ್ಲ ಎಂದರು. id="toptextpromo">ಬಿಜೆಪಿಯ
ಹಿರಿಯರ ವೇದಿಕೆಯ ರಾಜಕೀಯ ಚಟುವಟಿಕೆ ಮತ್ತು ನಿಲುವಿಗೂ ಸ್ವಾಭಿಮಾನಿ ವೇದಿಕೆಗೂ ಯಾವುದೇ ಸಂಬಂಧ ಇಲ್ಲ. ಹಿರಿಯರ ವೇದಿಕೆಯಲ್ಲಿ ಇರುವವರು ಈಗಲೂ ಬಿಜೆಪಿಯಲ್ಲೇ ಇದ್ದಾರೆ. ನಾನೂ ಸೇರಿದಂತೆ ಸ್ವಾಭಿಮಾನಿ ವೇದಿಕೆಯಲ್ಲಿ ಇರುವ ಹಲವರು ಬಿಜೆಪಿಯಿಂದ ಹೊರ ಹಾಕಲ್ಪಟ್ಟವರು. ಆದ ಕಾರಣ ಬಿಜೆಪಿ ಹಿರಿಯರ ವೇದಿಕೆಗೂ ಸ್ವಾಭಿಮಾನಿ ವೇದಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಶಕುಂತಳಾ ವಿವರಣೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ಹಿರಿಯರ ವೇದಿಕೆಯ ಮುಂದಾಳುಗಳಾದ ಕೆ. ರಾಮಭಟ್, ಅಣ್ಣಾ ವಿನಯಚಂದ್ರ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ವಾಭಿಮಾನಿ ವೇದಿಕೆಯಲ್ಲಿ ಸಕ್ರಿಯರಾಗಿದ್ದವರು. ಬಿಜೆಪಿಯ ಆಂತರಿಕ ವಿಚಾರಗಳ ಕುರಿತು ಪ್ರಶ್ನಿಸಿ, ಚುನಾವಣೆಯಲ್ಲಿ ಸ್ವಾಭಿಮಾನಿ ವೇದಿಕೆಯನ್ನು ಕಣಕ್ಕಿಳಿಸಿದವರೂ ಹೌದು. ಆದರೆ ಅವರು ಈಗಲೂ ಬಿಜೆಪಿಯಲ್ಲಿದ್ದಾರೆ ಎಂದು ಶಕುಂತಳಾ ಹೇಳಿದರು.











Click it and Unblock the Notifications