ಜನಾ ರೆಡ್ಡಿಯಿಂದ ಕೊಲೆ ಬೆದರಿಕೆ: ಟಪಾಲ್
ಬಳ್ಳಾರಿ,
ಮಾ.28: ಮಾಜಿ ಸಚಿವ ಜನಾರ್ದನ ರೆಡ್ಡಿಯಿಂದ ತನಗೆ ಜೀವ ಬೆದರಿಕೆ ಇದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ ಆರೋಪಿಸಿದ್ದಾರೆ. ಇದೇ ವೇಳೆ, ರೆಡ್ಡಿ ಜಗನ್ನಾಟಕವಾಡುತ್ತಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿನಲ್ಲೇ ಉಳಿಯುವುದಾಗಿ ಹೇಳುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ರೆಡ್ಡಿಗೆ ಸಹಕರಿಸುತ್ತಿದ್ದಾರೆ ಎಂದು ಆರೋಪ ಮಾಡಿದ ಟಪಾಲ್, ರೆಡ್ಡಿನ್ನು ಮತ್ತೆ ಚಂಚಲಗೂಡ ಜೈಲಿಗೇ ಕಳಿಸಬೇಕು ಎಂದು ಆಗ್ರಹಿಸಿದರು. id="toptextpromo">ನಗರದಲ್ಲಿ
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜನಾರ್ದನ ರೆಡ್ಡಿಯಿಂದ ತನಗೆ ಜೀವ ಬೆದರಿಕೆಯಿದೆ. ಅವರು ಅಲ್ಲಿ ಕೆಲ ಕೈದಿಗಳೊಂದಿಗೆ ಶಾಮೀಲಾಗಿ ತನ್ನನ್ನು ಕೊಲ್ಲಲ್ಲು ಸಂಚು ಹೂಡಿದ್ದಾರೆ ಎಂದು ಅವರು ಆತಂಕಪಟ್ಟರು. ಇಂದು ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿದ ಅವರು, ತಮಗೆ ಪ್ರಾಣ ಭಯ ಇರುವುದರಿಂದ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದರು. id='are-slot-1' class='oiad oi-axt oiadv'> id='top-searched-articles'>ಜನಾರ್ದನ
ರೆಡ್ಡಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ಧ ನಾನು ಹೋರಾಟ ನಡೆಸಿದ್ದೆ. ಇದರಿಂದಾಗಿ ಈ ಹಿಂದೆಯೂ ಜನಾರ್ದನ ರೆಡ್ಡಿ ತನ್ನ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರಿಗೆ ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಇದೀಗ ನನ್ನ ಕೊಲೆಗೆ ಸಂಚು ರೂಪಿಸಿದ್ದು, ನನಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಟಪಾಲ್ ಗಣೇಶ ಪೊಲೀಸರನ್ನು ಕೋರಿದ್ದಾರೆ.











Click it and Unblock the Notifications