ಶುಭೋದಯ ದಿನಪತ್ರಿಕೆ ಮುಚ್ಕೊಂಡ್ಹೋಯ್ತು

ಮೂರು ವರ್ಷಗಳ ಹಿಂದೆ ಸ್ವಯಂ ಕೃಷಿ ಹೆಸರಿನಲ್ಲಿ ಹತ್ತಾರು ಕಂಪನಿಗಳನ್ನು ಹುಟ್ಟುಹಾಕಿದ್ದ ಚಿಕ್ಕಬಳ್ಳಾಳಪುರ ಜಿಲ್ಲೆಯ ಶಿಡ್ಲಘಟ್ಟದ ಎಂ. ಮುರಳಿ, ಕನ್ನಡ ಸಿನಿ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ನಟ ಎನ್. ವೀರೇಂದ್ರಬಾಬು ಮತ್ತು ಅವರ ಒಂದಷ್ಟು ಗೆಳೆಯರು ಒಂದು ವರ್ಷದಿಂದ ಶುಭೋದಯ ಎಂಬ ಎಂಟ್ಹತ್ತು ಪುಟಗಳ ದಿನಪತ್ರಿಕೆಯನ್ನು ದಿನಾ ಛಾಪಿಸುತ್ತಿದ್ದರು. ಆ ಮೂಲಕ ದಂಧೆಯನ್ನು ಮುಚ್ಚಿಹಾಕಲು ಮತ್ತು ಅದಕ್ಕೊಂದು ಅಧಿಕೃತ ಮಾನ್ಯತೆ ನೀಡಲು ಯತ್ನಿಸಿದರು.
ಈ ಶುಭೋದಯ ಪತ್ರಿಕೆ ಹೇಗಿತ್ತಪ್ಪಾ ಅಂದರೆ ಅದರಲ್ಲಿ ಪ್ರಿಂಟ್ ಆಗುತ್ತಿದ್ದುದು ಆ ಪತ್ರಿಕೆ- ಈ ಪತ್ರಿಕೆಗಳಿಂದ ಕದ್ದ ಸರಕು. ಈ ಅಡಕಾಸ್ಪಿ ಪತ್ರಿಕೆಗೆ ಒಂದಷ್ಟು ತಲೆಮಾಸಿದ ಪತ್ರಕರ್ತರೂ ಸಾಥ್ ನೀಡಿದ್ದರು. ಇಂತಿಪ್ಪ ಶುಭೋದಯ ಪತ್ರಿಕೆಯಲ್ಲಿ ದಿನಾಲೂ 'ದಟ್ಸ್ ಕನ್ನಡ'ದಿಂದ ಎರಡು ಪುಟಕ್ಕಾಗುವಷ್ಟು ಸರಕನ್ನು ಕದಿಯಲಾಗುತ್ತಿತ್ತು. ಬಹುಶಃ ಆ ಪತ್ರಿಕೆ ಈಗಲೂ ಪ್ರಕಟವಾಗುತ್ತಿದ್ದಿದ್ದರೆ ಈ ಸುದ್ದಿಯನ್ನೂ ಚಾಚೂ ತಪ್ಪದೆ ಪ್ರಕಟಿಸುತ್ತಿದ್ದರೋ ಏನೋ!
ರಿಯಲ್ ಎಸ್ಟೇಟ್, ಸಾಫ್ಟ್ ವೇರ್, ಟಿವಿ ಚಾನೆಲ್, ಫಾರ್ಮಾಸ್ಯುಟಿಕಲ್ಸ್ ಹೀಗೆ ಹತ್ತಾರು ಕಂಪನಿಗಳ ಸಮೂಹ ತಮ್ಮದೆಂದು ಜನರನ್ನು ಯಾಮಾರಿಸಿದ್ದ ಈ 'ಸ್ವಯಂಕೃಷಿ ಖದೀಮರು' ಅಲ್ಪಾವಧಿಯಲ್ಲಿ ಜನರಿಂದ ಕೋಟ್ಯಂತರ ರುಪಾಯಿ ಠೇವಣಿ ಎತ್ತಿದ್ದಾರೆ. ಅದೇ ವೇಗದಲ್ಲೇ ಫೆಬ್ರವರಿ ತಿಂಗಳಲ್ಲಿ ಜಾಗ ಖಾಲಿ ಮಾಡಿದ್ದಾರೆ. ದುಡ್ಡು ಕಳೆದುಕೊಂಡ ಮಂದಿ ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾರೆ.
ವಿನಿವಿಂಕ್, ಗುರು ಟೀಕ್ ಸಾಲಿಗೆ ಸ್ವಯಂಕೃಷಿ ಸಮೂಹ ಸಂಸ್ಥೆಗಳೂ ಸೇರಿಕೊಂಡಿವೆ. ಬುದ್ಧಿಯಿಲ್ಲದ ನಮ್ಮ ಜನಕ್ಕೆ ಮತ್ತೆ ಅದೇ ಎಚ್ಚರಿಕೆಯ ಮಾತನ್ನು ಹೇಳುವುದಾದರೆ ಮೋಸ ಹೋಗೋಕ್ಕೆ ಜನ ಇರುವವರೆಗೂ ...
Swayam Krushi Group of Companies:
• Swayam Krushi Farm Estates India (P) Ltd.
• Sri Suraksha India Chits (P) Ltd.
• Swayam Krushi Souhardha Credit Co-operative Ltd.
• S.K. Courier and Cargo Services India (P) Ltd.
• Swayam Krushi Infotech (P) Ltd.
• Swayam Krushi India Entertainment (P) Ltd.
• Mussanje - Kannada Evening Newspaper.
• Shubodaya - Kannada Daily Newspaper.
• Shree Durga Malleswari Creations.
• Swayam Krushi Garments.
• Sri Suraksha Financial Services India (P) Ltd.
• S.K. India Export and Import (P) Ltd.
• Swayam Krushi Food Products.
• Swayam Krushi Security Services.












Click it and Unblock the Notifications