ರಾಜ್ಯ ಬಿಜೆಪಿ ನಾಯಕರು ದೆಹಲಿಗೆ, ಬೆಂಗಳೂರು ಭಣ ಭಣ..

ಈ ಮೂವರು ನಾಯಕರ ಜೊತೆ ಸುರೇಶ ಕುಮಾರ್, ಗೋವಿಂದ ಕಾರಿಜೋಳ, ಮುರುಗೇಶ್ ನಿರಾಣಿ ಕೂಡಾ ದೆಹಲಿಗೆ ಪ್ರಯಾಣಿಸಿದ್ದಾರೆ. ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಒಂದೇ ಗುರಿ ಹೊಂದಿರುವ ಯಡಿಯೂರಪ್ಪ ಮತ್ತು ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಆಗದ ಬಿಜೆಪಿ ಹೈಕಮಾಂಡ್ ಈ ಬಾರಿ ಯಾವ ರೀತಿ ಬಿಕ್ಕಟ್ಟನ್ನು ಶಮನ ಮಾಡುತ್ತವೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಈ ತಕ್ಷಣಕ್ಕೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರಾ ಎನ್ನುವುದಕ್ಕೆ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ ಕುಮಾರ್, ಧರ್ಮೇಂದ್ರ ಪ್ರಧಾನ್, ವೆಂಕಯ್ಯ ನಾಯ್ಡು, ರವಿಶಂಕರ್ ಪ್ರಸಾದ್ ಸೇರಿದಂತೆ ಯಾರ ಬಳಿಯೂ ಖಚಿತ ಉತ್ತರವಿಲ್ಲ. ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಕೆಲವು ಮುಖಂಡರು ಯಡಿಯೂರಪ್ಪ ಅವರಿಗೆ ಮತ್ತೆ ಪಟ್ಟ ಕಟ್ಟಲು ಶತಾಯಗತಾಯ ವಿರೋಧ ಮಾಡುತ್ತಿದ್ದಾರೆ.
ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಆಗಿ ನೇಮಕ ಮಾಡಿದರೆ ರಾಜಕೀಯ ಎದುರಾಳಿಗಳನ್ನು ನಿಭಾಯಿಸುವುದು ಹೇಗೆ ಎನ್ನುವುದು ಬಿಜೆಪಿ ಕೇಂದ್ರ ನಾಯಕರ ಮುಂದಾಲೋಚನೆ.
ಈಗಾಗಲೇ ಯಡಿಯೂರಪ್ಪ ಕೇಂದ್ರ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಆರಂಭಿಸಿದ್ದಾರೆ. ಕ್ಷಣ ಕ್ಷಣಕ್ಕೂ ರಾಜ್ಯ ಮತ್ತು ಕೇಂದ್ರದಲ್ಲಿ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ.












Click it and Unblock the Notifications