ಗೌಡ ನಿಂತಲ್ಲೇ ನಾನೂ ಕಣಕ್ಕೆ: ಖೇಣಿ ಸವಾಲ್
ಬೆಂಗಳೂರು,
ಮಾ.20: ಗೌಡ-ಖೇಣಿ ಆಟ ಮುಂದುವರಿದಿದೆ. 'ಜೆಡಿಎಸ್ ಅಧಿಪತಿ ಎಚ್ ಡಿ ದೇವೇಗೌಡ ಯಾವುದೇ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಗಾಗಿ ನಿಲ್ಲಲಿ ನಾನೂ ಅದೇ ಘಳಿಗೆಯಲ್ಲಿ, ಅದೇ ಕ್ಷೇತ್ರದಿಂದ ಸ್ಪರ್ಧಿಸುವೆ. ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ' ಎಂದು ನೈಸ್ ಒಡೆಯ ಅಶೋಕ್ ಖೇಣಿ ಘೋಷಿಸಿದ್ದಾರೆ. id="toptextpromo">ರೈತ
ವಿರೋಧಿ, ಪ್ರಗತಿ ವಿರೋಧಿ ದೇವೇಗೌಡರನ್ನು ನೈಸ್ ಆಗಿ ಅಪ್ಪಚ್ಚಿ ಮಾಡುವುದೇ ನನ್ನ ಗುರಿ. ಗೌಡರು 1 ಕೋಟಿ ರು. ಖರ್ಚು ಮಾಡಿದರೆ ನಾನು 2 ಕೋಟಿ ಖರ್ಚು ಮಾಡುತ್ತೇನೆ. ಒಟ್ಟಿನಲ್ಲಿ ಅವರನ್ನು ಸೋಲಿಸುವುದೇ ನನ್ನ ಉದ್ದೇಶ ಎಂದು ಖೇಣಿ ಕಣಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ಗೌಡರ ಉತ್ತರ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಗನಾರ್ಹವೆಂದರೆ ಈ ಬಾರಿಯ ಚುನಾವಣೆಯೇ ತಮ್ಮ ಜೀವಿತಾವಧಿಯ ಕೊನೆಯ ಚುನಾವಣೆ ಎಂದು ದೊಡ್ಡ ಗೌಡರು ಈಗಾಗಲೇ ಹೇಳಿದ್ದಾರೆ.











Click it and Unblock the Notifications