ಪ್ಲಾಟ್ ಫಾರಂಗಿಂತ ಪ್ರಯಾಣ ದರವೇ ಚೀಪ್! ಟ್ರೈ ಮಾಡಿ

ಇದು ಹೇಗೆ ವರ್ಕ್ ಔಟ್ ಆಗುತ್ತೆ ಗೊತ್ತಾ!?: ಬೆಂಗಳೂರು ಸಿಟಿ ರೈಲ್ವೆ ಸ್ಟೇಷನಿನಿಂದ ಯಶವಂತಪುರಕ್ಕೆ ಸಾಮಾನ್ಯ ದರ್ಜೆ ರೈಲ್ವೆ ಪ್ರಯಾಣ ದರ ಕೇವಲ 2 ರುಪಾಯಿ. ಇದಿಷ್ಟೇ ಸಾಕು. ದುಬಾರಿ ಪ್ಲಾಟ್ ಫಾರಂ ಟಿಕೆಟ್ ಹಣ ಉಳಿಸಲು. ಏಕೆಂದರೆ ಮೊನ್ನೆ ಬಜೆಟ್ ನಲ್ಲಿ ಪ್ಲಾಟ್ ಫಾರಂ ಟಿಕೆಟ್ ದರವನ್ನು 5 ರುಪಾಯಿಗೆ ಏರಿಸಿದ್ದಾರೆ. ಸೋ, ಬೆಂಗಳೂರು ಸಿಟಿ ರೈಲ್ವೆ ಸ್ಟೇಷನಿನಲ್ಲಿ ನೀವು ದುಬಾರಿ ಪ್ಲಾಟ್ ಫಾರಂ ಟಿಕೆಟ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ.
ಸ್ಟೇಷನಿನೊಳಕ್ಕೆ ಹೋಗುತ್ತಿದ್ದಂತೆ 5 ರೂಪಾಯಿ ಕೊಟ್ಟು ಪ್ಲಾಟ್ ಫಾರಂ ಟಿಕೆಟ್ ತೆಗೆದುಕೊಳ್ಳುವ ಬದಲು 2 ರುಪಾಯಿ ಕೊಟ್ಟು ಯಶವಂತಪುರಕ್ಕೆ ಟಿಕೆಟ್ ತೆಗೆದುಕೊಂಡರೆ ಸಾಕು. ಅಲ್ಲಿಗೆ 2 ರು. ಉಳಿಸಬಹುದು. ಹೇಗಿದೆ ಐಡಿಯಾ !? ಇದು ಮೈಸೂರು, ಬೆಳಗಾಂ ಮತ್ತಿತರ ರೈಲ್ವೆ ನಿಲ್ದಾಣಗಳಲ್ಲೂ ಇಂತಹ ಭಾಗ್ಯವಿದೆಯಾ? ತಿಳಿದುಕೊಳ್ಳಿ.
ಇಲ್ಲಿ ಇನ್ನೂ ಒಂದು ವಿಷ್ಯಾ ಇದೆ. ಏನಪಾ ಅಂದರೆ 5 ರೂಪಾಯಿ ಕೊಟ್ಟು ತೆಗೆದುಕೊಳ್ಳುವ ಪ್ಲಾಟ್ ಫಾರಂ ಟಿಕೆಟ್ ಕಾಲಾವಧಿ ಕೇವಲ 2 ಗಂಟೆಗೆ ಸೀಮಿತ. ಅದೇ 2 ರುಪಾಯಿ ಕೊಟ್ಟು ಯಶವಂತಪುರಕ್ಕೆ ಟಿಕೆಟ್ ತೆಗೆದುಕೊಂಡರೆ 24 ಗಂಟೆ ಅವಧಿಗೂ ಅದೇ ಪ್ಲಾಟ್ ಫಾರಂ ಟಿಕೆಟ್ ಆಗಿ ಚಾಲ್ತಿಯಲ್ಲಿರುತ್ತದೆ.
ಪ್ರೇಮಿಗಳಿಗೆ ಹಾಸಿಗೆ ಹಾಸಿಕೊಟ್ಟಂತೆ ಸರ್ವಜ್ಞ: ಇನ್ನೊಂದು ಲೆಕ್ಕಾಚಾರ ಹೀಗಿದೆ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿ ದಿನ 9,000 ಪ್ಲಾಟ್ ಫಾರಂ ಟಿಕೆಟುಗಳು ಮಾರಾಟವಾಗುತ್ತವೆ. ಅಷ್ಟಕ್ಕೂ ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಿಸುವುದಕ್ಕೆ ಮುಖ್ಯ ಕಾರಣವೇನಪ್ಪಾ ಅಂದ್ರೆ ಪೋಲಿಗಳು, ಪುಂಡಪೋಕರಿಗಳಿಗೆ ಇದು ನೆಚ್ಚಿನ ಆಶ್ರಯ ತಾಣ. ಅದಕ್ಕೆ ಕಡಿವಾಣ ಹಾಕುವ ಸಲುವಾಗಿಯೇ ಪ್ಲಾಟ್ ಫಾರಂ ಟಿಕೆಟಿಗೆ ಕಾಲಾವಧಿ ನಿಗದಿಪಡಿಸಿ, ದರ ಫಿಕ್ಸ್ ಮಾಡಿರುತ್ತಾರೆ.
ಈಗ ಏನಾಗಿದೆಯಪಾ ಅಂದ್ರೆ ನಿದ್ದೆ ಮಾಡೋರಿಗೆ ಹಾಸಿಗೆ ಹಾಸುಕೊಟ್ಟಂತಾಗಿದೆ. ಪ್ಲಾಟ್ ಫಾರಂ ಅನ್ನೇ ಮನೆಯಾಗಿಸಿಕೊಳ್ಳುವ ರೆಗ್ಯುಲರ್ ಗಳು ದುಬಾರಿ ಪ್ಲಾಟ್ ಫಾರಂ ಟಿಕೆಟ್ ಮರ್ಮ ತಿಳಿದುಕೊಂಡು ಅಗ್ಗದ ಪ್ರಯಾಣ ಟಿಕೆಟ್ ಅನ್ನೇ ಖರೀದಿಸುತ್ತಿದ್ದಾರೆ. ಪ್ರೀತಿ ಪ್ರೇಮದ ಪಡ್ಡೆಗಳಿಗಂತೂ ಇದು ಹೇಳಿ ಮಾಡಿಸಿದಂತಿದೆ.











Click it and Unblock the Notifications