ಮಾ.18ಕ್ಕೆ ಖೇಣಿ 'ಕರ್ನಾಟಕ ಮಕ್ಕಳ ಪಕ್ಷ' ಉದಯ

ಮಾ.18ರಂದು ರಾಣೆಬೆನ್ನೂರಿನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಅಯೋಜಿಸಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸದಸ್ಯತ್ವ ನೋಂದಣಿ ಮುಕ್ತಾಯ ಹಂತಕ್ಕೆ ಬಂದಿದೆ.
ಎಲ್ಲಾ ಜಿಲ್ಲೆಗಳಲ್ಲೂ ಪಕ್ಷದ ಕಚೇರಿ ಆರಂಭವಾಗಲಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ 80 ಕ್ಷೇತಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಭ್ರಷ್ಟಾಚಾರ ರಹಿತ ಆಡಳಿತ ಮತ್ತು ರೈತ, ನಿರ್ಗತಿಕರ ಏಳಿಗೆಗೆ ಪಕ್ಷ ಶ್ರಮಿಸಲಿದೆ ಎಂದು ನಾಗೇಂದ್ರ ಹೇಳಿದರು.
ಲಿಂಗಾಯತ ಸಮುದಾಯಕ್ಕೆ ಸೇರಿರುವ ಖೇಣಿ ಅವರು ಬೀದರ್, ಗುಲ್ಬರ್ಗ, ಬಿಜಾಪುರ, ರಾಯಚೂರು ಮತ್ತು ಉತ್ತರ ಕರ್ನಾಟಕದಲ್ಲಿ ಉತ್ತಮ ಬೆಂಬಲ ಗಳಿಸಲು ಮಠಾಧೀಶರ ಮೊರೆ ಹೊಕ್ಕಿದ್ದಾರೆ. ಬಿಎಸ್ ಯಡಿಯೂರಪ್ಪ ಅವರಿಗೆ ಈಗಾಗಲೇ 70ಕ್ಕೂ ಅಧಿಕ ಮಠಗಳು ಬೆಂಬಲಕ್ಕೆ ನಿಂತಿದೆ ಎನ್ನಲಾಗಿದೆ.
ಯಡಿಯೂರಪ್ಪ ಅವರ ಅಂದಿನ ಸರ್ಕಾರಕ್ಕೆ ಸಾಕಷ್ಟು ನೆರವು ನೀಡಿದ್ದ ಖೇಣಿ ಅವರ ಉಪಕಾರ ಸ್ಮರಿಸಿ, ಯಡಿಯೂರಪ್ಪ ಅವರು ಖೇಣಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ, ಬಿಜೆಪಿ ತೊರೆಯುವ ಬಗ್ಗೆ ಇನ್ನೂ ಬಿಎಸ್ ವೈ ಬಣ ಸ್ಪಷ್ಟ ಸೂಚನೆ ನೀಡಿಲ್ಲ.












Click it and Unblock the Notifications