'ಅನುಮಾನವೇ ಬೇಡ ನನ್ನಿಂದಲೇ ಬಜೆಟ್'

ಮಾರ್ಚ್ 20ರಂದು ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತದೆ. ಮರುದಿನ 11 ಗಂಟೆಗೆ ನಾನೇ ಬಜೆಟ್ ಮಂಡಿಸುವೆ. ಅಧಿವೇಶನದ ಬಗ್ಗೆ ಅಧಿಸೂಚನೆ ಹೊರಬಿದ್ದಿದೆ. ಅನಗತ್ಯ ಗೊಂದಲ ಬೇಡ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಿಎಂ ಸದಾನಂದ ಗೌಡ ಸ್ಪಷ್ಟಪಡಿಸಿದರು.
'ಶಾಸಕರಿಗೆ ಅಧಿವೇಶನ ನಡಾವಳಿ ಪತ್ರ ತಲುಪಿಯೇ ಇಲ್ಲವಂತೆ. ಅಧಿವೇಶನ ನಡೆಯುವುದು ಅನುಮಾನವಾ?' ಎಂದು ಸುದ್ದಿಗಾರರು ಪ್ರಶ್ನಿಸಿದಾಗ 'ಪ್ರಕ್ರಿಯೆ ಆರಂಭವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಶ್ನಾವಳಿ ಇದ್ದಾಗ ಮಾತ್ರ ಒಂದು ವಾರಕ್ಕೆ ಮುಂಚೆ ನಡಾವಳಿ ಸೂಚನೆ ನೀಡಬೇಕಾಗುತ್ತದೆ. ಇಂಥದ್ದಕ್ಕೆಲ್ಲ ಸಾಮಾನ್ಯವಾಗಿ 3 ದಿನವಿದ್ದರೆ ಸಾಕು' ಎಂದು ಸದಾನಂದ ಮಾರುತ್ತರ ನೀಡಿದರು.
'ಅಧಿವೇಶನದ ಮೊದಲ ದಿನ ಸಂಪ್ರದಾಯದಂತೆ, ಮೊನ್ನೆ ನಿಧನರಾದ ವಿ ಎಸ್ ಆಚಾರ್ಯರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಬಳಿಕ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ' ಎಂದೂ ಅವರು ಹೇಳಿದರು.











Click it and Unblock the Notifications