ಮುಂದುವರಿಸಿದ ಕೋರ್ಟ್ ಬಹಿಷ್ಕಾರ: ಸಿಜೆ ಎಚ್ಚರಿಕೆ

blore-lawyers-restrain-abstaing-from-courts-cj-sen
ಬೆಂಗಳೂರು,ಮಾ.13: ಎಂಟು ದಿನಗಳಿಂದ ಕೋರ್ಟ್‌ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮುಂದುವರಿಸುತ್ತಿರುವ ಸಿಟಿ ಸಿವಿಲ್‌ ಕೋರ್ಟ್‌ ವಕೀಲರ ವಿರುದ್ಧ ಮುಖ್ಯ ನ್ಯಾಯಮೂರ್ತಿಗಳು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾ ನಿರತರ ವಿರುದ್ಧ 'ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ' ಮೊಕದ್ದಮೆ ಹೂಡುವುದಾಗಿ ಗಂಭೀರ ಎಚ್ಚರಿಕೆ ನೀಡಿದರು.

ಎಂದಿನಂತೆ ಸೋಮವಾರ ಬೆಳಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿಗಳೂ ತಮ್ಮ ನ್ಯಾಯಪೀಠದಲ್ಲಿ ಕಲಾಪ ಆರಂಭಿಸಿರು. ಕಲಾಪ ನಡೆಸುತ್ತಿರುವ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ, ಬೆಂಗಳೂರು ಅಧ್ಯಕ್ಷ ಕೆ.ಎನ್‌. ಸುಬ್ಟಾರೆಡ್ಡಿ ಹಾಗೂ ಚೆನ್ನೈನಿಂದ ಬಂದಿದ್ದ ಹಲವಾರು ವಕೀಲರ ತಂಡ 'ಕಲಾಪ ಮೊಟಕು' ಗೊಳಿಸುವಂತೆ ಕೋರಿದರು. ಇದು ಮುಖ್ಯ ನ್ಯಾಯಮೂರ್ತಿಗಳ ಆಕ್ರೋಶಕ್ಕೆ ಕಾರಣವಾಯಿತು.

'ಕೋರ್ಟ್‌ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಈಗಾಗಲೇ ನಿಮಗೆ ಸೂಕ್ಷ್ಮವಾಗಿ ಹೇಳಿದ್ದೇನೆ. ಆದರೆ, ಅದನ್ನು ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ. ಕಲಾಪವನ್ನು ಬಹಿಷ್ಕರಿಸುವುದು ಮುಂದುವರಿದರೆ ನಿಮ್ಮ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುತ್ತೇನೆ. ಆಗ ಎಲ್ಲವೂ ಸರಿಹೋಗುತ್ತದೆ.

ನಾನೂ ನೋಡ್ತಾನೇ ಇದ್ದೀನಿ: ಘಟನೆ ನಡೆದ ದಿನದಿಂದಲೂ ನಾನೂ ಎಲ್ಲವನ್ನು ಗಮನಿಸುತ್ತಿದ್ದೇನೆ. ನಿಮ್ಮ ವರ್ತನೆ ಹಾಗೂ ಧೋರಣೆಗಳು ನನಗೆ ಸರಿ ಕಾಣುತ್ತಿಲ್ಲ. ಮೊದಲು ಪ್ರತಿಭಟನೆಯನ್ನು ಹಿಂಪಡೆಯಿರಿ, ನಂತರ ಕೂತು ಕೂಲಂಕುಶವಾಗಿ ಮಾತುಕತೆ ನಡೆಸೋಣ. ನಿಮಗೆ ಎಲ್ಲ ರೀತಿಯಲ್ಲೂ ಸಹಕರಿಸಲು ನಾನು ಸಿದ್ದನಿದ್ದೇನೆ' ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಚಾಟಿ ಬೀಸಿದರು.

ಮುಖ್ಯ ನ್ಯಾಯಮೂರ್ತಿಗಳ ಆಕ್ರೋಶವನ್ನು ಕಂಡ ವಕೀಲರು ಒಂದು ಕ್ಷಣ ಬೆಚ್ಚಿಬಿದ್ದು, ತೆಪ್ಪಗಾದರು. ನಂತರ ಯಾವುದೇ ಪ್ರಕ್ರಿಯೆ ನೀಡದೆ ಕೋರ್ಟ್‌ ಹಾಲ್‌ನಿಂದ ನಿರ್ಗಮಿಸಿದರು. ನಂತರ ಬೆಳಗ್ಗೆ 11.30ಕ್ಕೆ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್‌, ಅಧ್ಯಕ್ಷ ಸುಬ್ಬಾರೆಡ್ಡಿ ವಕೀಲರ ತಂಡ ಕಟ್ಟಿಕೊಂಡು ಮತ್ತೂಮ್ಮೆ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್‌ಗೆ ಬಂದು ಕುಳಿತರು.

ಆದರೆ, ವಕೀಲರ ಈ ಧೋರಣೆಯನ್ನು ಕಂಡೂ ಕಾಣದಂತಿದ್ದ ಮುಖ್ಯ ನ್ಯಾಯಮೂರ್ತಿಗಳು, ಕಲಾಪ ಮುಂದುವರೆಸಿದರು. ತಮ್ಮನ್ನು ನಿರ್ಲಕ್ಷಿಸಿದ ಸಿಜೆ ನಡೆಯ ಬಗ್ಗೆ ಬೇಸರಗೊಂಡ ವಕೀಲರ ಗುಂಪು, ಸ್ವಲ್ಪ ಕಾಲ ಕೋರ್ಟ್‌ ಹಾಲ್‌ನಲ್ಲೇ ಕುಳಿತರು. ಬಳಿಕ ಮುಖ್ಯ ನ್ಯಾಯಮೂರ್ತಿಗಳ ತಮ್ಮ ಅಳಲು ಆಲಿಸಲು ಸಿದ್ದರಿಲ್ಲ ಎಂಬ ವಿಷಯ ಅರಿತು ಬಂದ ದಾರಿಗೆ ಸುಂಕವಿಲ್ಲ ಎಂದು ಹೊರನಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+