ಅನೈತಿಕ ಸಂಬಂಧ ಶಂಕೆ, ಪತ್ನಿ ಗೆಳೆಯನ ಕೊಲೆ

ಗವೇನಹಳ್ಳಿ ಗ್ರಾಮದ ಪುರುಷೋತ್ತಮನನ್ನು ಜಾರ್ಜ್ ಎಂಬುವವನು ಸಿನಿಮೀಯ ಮಾದರಿಯಲ್ಲಿ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಗೆ ಕಾರಣ?: ಪುರುಷೋತ್ತಮ ತಡ ರಾತ್ರಿ ವೇಳೆ ಕಟ್ಟಾಯ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮಕ್ಕೆ ತೆರಳಿ, ಜಾರ್ಜ್ ಮನೆ ಬಾಗಿಲು ತಟ್ಟಿ ಆತನ ಪತ್ನಿಯನ್ನು ಕರೆದಿದ್ದಾನೆ.
ಆದರೆ, ಬಾಗಿಲು ತೆಗೆದಿದ್ದು ಮಾತ್ರ, ಮನೆಯಲ್ಲೇ ಇದ್ದ ಜಾರ್ಜ್. ಜಾರ್ಜ್ ಕಂಡು ಭಯಗೊಂಡ ಪುರುಷೋತ್ತಮ ಅಲ್ಲಿಂದ ಓಡ ಕಿತ್ತಿದ್ದಾನೆ.
ಪತ್ನಿ ಗೆಳೆಯ ಪುರುಷೋತ್ತಮನನ್ನು ಜಾರ್ಜ್ ಗೂ ಪರಿಚಿತನಾಗಿದ್ದ. ಆದರೆ, ಪುರುಷೋತ್ತಮನ ಮೇಲೆ ಮೊದಲಿಂದಲೂ ಸಂಶಯ ಹೊಂದಿದ್ದ ಜಾರ್ಜ್, ಏಕಾಏಕಿ ಪುರುಷೋತ್ತಮ ಏಕೆ ಓಡಿದ ಎಂದು ಚಿಂತಿಸತೊಡಗಿದ್ದಾನೆ. ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಶಂಕೆ ಅತನಿಗೆ ಬಂದಿದೆ.
ತಕ್ಷಣವೇ ಕೈಲಿ ಮಚ್ಚು ಹಿಡಿದು ಪುರುಷೋತ್ತಮನನ್ನು ಅಟ್ಟಿಸಿಕೊಂಡು ಓಡಿ, ಅವನನ್ನು ಕೊಚ್ಚಿ ಕೊಂದಿದ್ದಾನೆ. ನಂತರ ಪುರುಷೋತ್ತಮ ಬಂದಿದ್ದ ಆಟೋ[ಕೆ.ಎ 13-ಎ-2679] ದಲ್ಲೇ ಶವ ತುಂಬಿಕೊಂಡು ಹೇಮಾವತಿ ನದಿ ಹಿನ್ನೀರಿಗೆ ಎಸೆಯಲು ಯತ್ನಿಸಿದ್ದಾನೆ.
ಆದರೆ, ಅಷ್ಟರಲ್ಲಿ ಸುದ್ದಿ ತಿಳಿದ ಗೊರೂರು ಪೊಲೀಸರು ಆಟೋ ಸಮೇತ ಜಾರ್ಜ್ ನನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications