ಕಿಟಕಿಯಿಂದ ಹೊರಕ್ಕೆ ಹಾಕಿದ ತಲೆ ಕಚಕ್!

ಕೊಡಿಗೆಹಳ್ಳಿ ಭದ್ರಪ್ಪ ಲೇಔಟ್ ನಿಂದ ಹೊರವರ್ತುಲ ರಸ್ತೆವರೆಗೂ ಸಂಚಾದ ದಟ್ಟಣೆ ಅಧಿಕವಾಗಿತ್ತು. ಈ ಸಂದರ್ಭದಲ್ಲಿ ಬಸ್ ನಲ್ಲಿ ಕೂತಿದ್ದ ವ್ಯಕ್ತಿ, ಟ್ರಾಫಿಕ್ ಜಾಮ್ ನೋಡಲು ಕಿಟಕಿಯಿಂದ ಕತ್ತು ಹೊರಹಾಕಿದ್ದಾರೆ. ತರಿಕೇರಿ ನಿವಾಸಿ ಹರೀಶ್ ಅಲಿಯಾಸ್ ಸುರೇಶ್ (24) ಎಂದು ತಿಳಿದು ಬಂದಿದೆ.
ಹೆಬ್ಬಾಳದಿಂದ ಕೊಡಿಗೆಹಳ್ಳಿಗೆ ಹೋಗುತ್ತಿದ್ದ ಬಸ್ ಭದ್ರಪ್ಪ ಲೇಔಟ್ ಸಿಗ್ನಲ್ ನಲ್ಲಿ ಚಲಿಸುವಾಗ ಪ್ರಯಾಣಿಕ ಹರೀಶ್ ತಲೆಯನ್ನು ಕಿಟಕಿಯಿಂದ ಹೊರ ಹಾಕಿ ಪ್ರಾಣಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಬಸ್ ಸಡನ್ ಆಗಿ ಚಾಲನೆ ಮಾಡಿದೆ. ನಿಂತಿದ್ದ ಟೆಂಪೋಗೆ ವ್ಯಕ್ತಿಯ ಕತ್ತು ಬಡಿದು ಕತ್ತು ಬೇರ್ಪಟ್ಟಿದೆ. ಕ್ಷಣಾರ್ಧದಲ್ಲಿ ನಡೆದ ಈ ಘಟನೆ ಕಂಡು ಸಹ ಪ್ರಯಾಣಿಕರು ದಂಗಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೆಬ್ಬಾಳ ಸಂಚಾರ ಪೊಲೀಸ್, ಕೊಡಿಗೆಹಳ್ಳಿ ಪೊಲೀಸರು ಆಗಮಿಸಿದ್ದು, ಮೃತ ವ್ಯಕ್ತಿಯ ತಲೆ, ದೇಹವನ್ನು ಹೊತ್ತು ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಿಟಕಿಯಿಂದ ಹೊರಕ್ಕೆ ತಲೆ, ಕೈ ಹಾಕಬೇಡಿ ಎಂದು ಚಾಲಕರು, ಕಂಡೆಕ್ಟರ್ ಗಳು ಪದೇ ಪದೇ ಎಚ್ಚರಿಕೆ ನೀಡಿದರೂ ಸಾರ್ವಜನಿಕರು ತಲೆ ಕೆಡಿಸಿಕೊಳ್ಳದಿರುವುದು ದುರಂತದಲ್ಲಿ ಕೊನೆಯಾಗಿದೆ.












Click it and Unblock the Notifications