ಬಜೆಟ್ ನಿರೀಕ್ಷೆ: ಕನ್ನಡಿಗರಿಗೆ ಐದು ಹೊಸ ರೈಲು

Railway Budget 2012-13
ಬೆಂಗಳೂರು, ಮಾ 10: 2012-13ರ ಸಾಲಿನ ಕೇಂದ್ರ ರೈಲ್ವೆ ಮುಂಗಡ ಬಜೆಟ್ ಕುರಿತು ಕನ್ನಡಿಗರು ಹೊಸ ನಿರೀಕ್ಷೆಯಿಂದಿದ್ದಾರೆ. ಒಂದು ವರದಿಯ ಪ್ರಕಾರ ಪ್ರಸಕ್ತ ವರ್ಷ ರಾಜ್ಯಕ್ಕೆ ಐದು ಹೊಸ ರೈಲು ಮಂಜೂರಾಗಲಿದೆಯಂತೆ.

ಹೊಸದಾಗಿ ಶ್ರವಣಬೆಳಗೊಳ-ಹಾಸನ-ಮೈಸೂರು ಪ್ಯಾಸೆಂಜರ್ ರೈಲು, ಮುಂಬೈ-ಮಂಗಳೂರು-ತಿರುನೆಲ್ವೇಲಿ, ಸೋಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲುಗಳಿಗೆ ಹಸಿರು ನಿಶಾನೆ ದೊರಕುವ ನಿರೀಕ್ಷೆಯಿದೆ.

ಇವುಗಳೊಂದಿಗೆ ಸುಮಾರು 500 ಕಿ.ಮೀ. ಹೊಸ ರೈಲು ಮಾರ್ಗಗಳಿಗೆ ಈ ಬಜೆಟ್ ಅವಕಾಶ ನೀಡುವ ಸಾಧ್ಯತೆಯಿದೆ. ರೈಲ್ವೆ ಬಜೆಟಿನಲ್ಲಿ ಹೆಚ್ಚಿನ ಸವಲತ್ತು. ಸೌಲಭ್ಯ, ಯೋಜನೆಗಳು ದೊರಕುವ ನಿರೀಕ್ಷೆಯಿದೆ.

ಇದರೊಂದಿಗೆ ಶ್ರವಣಬೆಳಗೊಳ-ಬೆಂಗಳೂರು, ಹುಬ್ಬಳ್ಳಿ-ಅಂಕೋಲ, ಬೀದರ್-ಗುಲ್ಬರ್ಗ, ಹೊಸಪೇಟೆ-ಕೊಟ್ಟೂರು-ಹರಿಹರ, ಕುಡಿಚಿ-ಬಾಗಲಕೋಟೆ ನಡುವೆ ಹೊಸ ಮಾರ್ಗ ಸಮೀಕ್ಷೆ ಮಾಡಲು ಪ್ರಸಕ್ತ ಬಜೆಟ್ ಅವಕಾಶ ನೀಡುವ ನಿರೀಕ್ಷೆಯನ್ನು ವರದಿಗಳು ವ್ಯಕ್ತಪಡಿಸಿವೆ.

ಪ್ರಸಕ್ತ ರೈಲ್ವೆ ಬಜೆಟಿನಲ್ಲಿ ಬೆಂಗಳೂರು ಮತ್ತು ಮಂಗಳೂರು ರೈಲು ವಿಭಜನೆಯಾಗುವ ನಿರೀಕ್ಷೆಯಿದೆ. ಅಂದರೆ ನೈರುತ್ಯ ವಲಯವು ಯಶವಂತಪುರ-ಮಂಗಳೂರು-ಕಣ್ಣೂರು ರೈಲ್ವೆ ಬೋಗಿಗಳನ್ನು ವಿಭಜಿಸಿ, ಪ್ರತ್ಯೇಕ ಎಂಜಿನ್ ಜೋಡಿಸುವ ಸಾಧ್ಯತೆಯಿದೆ. ಇದರಿಂದ ಒಂದು ಬೋಗಿ ಕಣ್ಣೂರು ಕಡೆಗೂ ಮತ್ತೊಂದು ಬೋಗಿ ಕಾರವಾರ ಕಡೆಗೂ ಪ್ರಯಾಣ ಬೆಳೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+