ಕಬ್ಬನ್ ಪಾರ್ಕಿಗೆ ಬೆಂಕಿ: ಅಲ್ಲಲ್ಲಿ ಅಗ್ನಿ ಆಕಸ್ಮಿಕ

ರೆಸಿಡೆನ್ಸಿ ರಸ್ತೆಯಲ್ಲಿರುವ ಆರ್ ಬಿಎಸ್ ಬ್ಯಾಂಕ್ ಸಮೀಪ ನಿಲ್ಲಿಸಿರುವ ಮಾರುತಿ ಆಮ್ನಿ ಕಾರು ನಿನ್ನೆ ಅಪರಾಹ್ನ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದೆ. ಕಾರಿನ ಪೆಟ್ರೋಲ್ ಸೋರಿಕೆ ಘಟನೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಬ್ಬನ್ ಪಾರ್ಕ್ ಉದ್ಯಾನವನದಲ್ಲೂ ಬೆಂಕಿ ಆಕಸ್ಮಿಕ ನಡೆದಿದೆ. ಅಲ್ಲಿನ ಒಣಗಿದ ಎಲೆಗೆ ಬೆಂಕಿ ಬಿದ್ದ ಕಾರಣ ಈ ಘಟನೆ ಸಂಭವಿಸಿದೆ. ಬೆಂಕಿ ಬಿದಿರಿನವರೆಗೂ ವ್ಯಾಪಿಸಿತ್ತು.
ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ಸಮೀಪವಿರುವ ಗಿರಿಯಾಸ್ ಮಾಲಿನಲ್ಲೂ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಗೃಹೋಪಯೋಗಿ, ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎನ್ನಲಾಗಿದೆ. ಮೂರು ಕಡೆಗೂ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸಂಭಾವ್ಯ ಭಾರಿ ಅನಾಹುತ ತಪ್ಪಿಸಿದ್ದಾರೆ.











Click it and Unblock the Notifications