ಯಡಿಯೂರಪ್ಪಗೆ ಸದ್ಯಕ್ಕೆ ಏನೂ ಇಲ್ಲ : ಗಡ್ಕರಿ

ಪಣಜಿ, ಮಾ.9: ಮನೋಹರ್ ಪರಿಕ್ಕಾರ್ ಅವರು ಗೋವಾದ ನೂತನ ಸಿಎಂ ಆಗಿ ಪದಗ್ರಹಣ ಮಾಡುವ ಕಾರ್ಯಕ್ರಮಕ್ಕೆ ಹೊರಟ ನಿತಿನ್ ಗಡ್ಕರಿ ಅವರು ಕರ್ನಾಟಕದಲ್ಲಿ ನಾಯಕತ್ವದಲ್ಲಿ ಬದಲಾವಣೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

'ಬಜೆಟ್ ಅಧಿವೇಶನಕ್ಕೆ ಮುನ್ನ ಯಾವುದೇ ರೀತಿಯ ಬದಲಾವಣೆ ಮಾಡುವುದಿಲ್ಲ. ಸಿಎಂ ಸದಾನಂದ ಗೌಡರೇ ಬಜೆಟ್ ಮಂಡಿಸಲಿದ್ದಾರೆ' ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ. ಇದೇ ವಿಷಯವನ್ನು ಯಡಿಯೂರಪ್ಪ ಅವರ ಬೆಂಬಲಿಗರಿಗೂ ತಿಳಿಸುವಂತೆ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ಗಡ್ಕರಿ ಫೋನ್ ಕರೆ ಮಾಡಿ ಹೇಳಿದ್ದಾರೆ.

ಈ ನಡುವೆ ಗೋವಾ ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸದಾನಂದ ಗೌಡರು ತೆರಳಿದ್ದಾರೆ. ಅಲ್ಲಿ ನಿತಿನ್ ಗಡ್ಕರಿ ಅವರೊಂದಿಗೆ ಬಿಜೆಪಿ ಬಿಕ್ಕಟ್ಟು, ಬಜೆಟ್ ಮಂಡನೆ, ನಾಯಕತ್ವ ಬದಲಾವಣೆ ಜೊತೆಗೆ ರಾಜ್ಯ ಸಭೆ ನಾಲ್ಕು ಸ್ಥಾನಗಳ ವಿಚಾರವಾಗಿ ಚರ್ಚಿಸಿದ್ದಾರೆ.

ಯಡಿಯೂರಪ್ಪ ಅವರ ಕೇಸುಗಳು ಹಾಗೂ ಎಫ್ ಐಆರ್ ರದ್ದು ಬಗ್ಗೆ ಗಡ್ಕರಿಗೆ ವಿವರಗಳು ಲಭ್ಯವಾಗಿದೆ. ಜೊತೆಗೆ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಎಸ್ ವೈ ಬೆಂಬಲಿಗರಿಗೆ ಕಡಿವಾಣ ಹಾಕಲು ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರಿಗೆ ಗಡ್ಕರಿ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+