ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲದ ಗೂಡಾದ 'ರಾಜ್ಯ'ಸಭೆ ಚುನಾವಣೆ

By Srinath
|
Google Oneindia Kannada News

rajya-sabha-elections-4-seats-karnataka-march-30
ಬೆಂಗಳೂರು, ಮಾ.8: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನ ಕೆ. ರೆಹಮಾನ್‌ ಖಾನ್, ರಾಜೀವ್ ಚಂದ್ರಶೇಖರ್ ಮತ್ತು ಬಿಜೆಪಿಯ ಕೆ.ಬಿ. ಶಾಣಪ್ಪ, ಹೇಮಮಾಲಿನಿ ಅವರ ಸ್ಥಾನಗಳು ಎಪ್ರಿಲ್ ಮೊದಲ ವಾರಕ್ಕೆ ತೆರವಾಗಲಿವೆ.

ಆದ್ದರಿಂದ ಈ ಸ್ಥಾನಗಳಿಗಾಗಿ ಮಾರ್ಚ್ 30ರಂದು ಮತದಾನ ನಡೆಯಲಿದೆ. ಇದರೊಟ್ಟಿಗೆ ಒಟ್ಟು 15 ರಾಜ್ಯಗಳಲ್ಲಿ 58 ರಾಜ್ಯಸಭೆ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.

ಈ ದ್ವೈವಾರ್ಷಿಕ ಚುನಾವಣೆಗೆ ಮಾ. 12ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಮಾ. 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮಾ. 20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಮಾ. 22 ಅಂತಿಮ ದಿನ. ಮಾ. 30ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದೆ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

ಕುತೂಹಲದ ಗೂಡಾದ ಕರ್ನಾಟಕ: ಹೇಮಮಾಲಿನಿ ಈ ಬಾರಿ ಕರ್ನಾಟಕದಿಂದ ಸ್ಪರ್ಧಿಸಲು ಇಚ್ಛಿಸಿಲ್ಲ. ಬದಲಿಗೆ ಮಹಾರಾಷ್ಟ್ರದಿಂದ ಆಯ್ಕೆಯಾಗಬಯಸಿದ್ದಾರೆ. ಇನ್ನು ಶಾಣಪ್ಪ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧವಿಲ್ಲ. ಪಕ್ಷದ ಕೇಂದ್ರ ನಾಯಕರಾದ ಧರ್ಮೇಂದ್ರ ಪ್ರಧಾನ್ ಅಥವಾ ನಿರ್ಮಲಾ ಸೀತಾರಾಮನ್ ಅವರಲ್ಲಿ ಒಬ್ಬರನ್ನು ಕರ್ನಾಟಕದಿಂದ ಆರಿಸಿ ಕಳಿಸಲು ಬಿಜೆಪಿ ಆಲೋಚಿಸುತ್ತಿದೆ ಎನ್ನಲಾಗಿದೆ.

ಆಡಳಿತಾರೂಢ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದಾಗಿ ಕರ್ನಾಟಕದಲ್ಲಿ 4 ಸ್ಥಾನಗಳಿಗೆ ನಡೆಯಲಿರುವ ರಾಜ್ಯಸಭೆ ಚುನಾವಣೆ ಕುತೂಹಲದ ಗೂಡಾಗಿದೆ.

English summary
The Election Commission has announced the schedule for biennial polls to 4 Rajya Sabha seats in Karnataka on Mar 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X